ಭುವೇನಶ್ವರ (ಪಿಟಿಐ): `ಗೀತ ಗೋವಿಂದ' ಖ್ಯಾತಿಯ, ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರ ಪಂಡಿತ್ ರಘುನಾಥ್ ಪಾಣಿಗ್ರಾಹಿ (80) ಅವರು ಹೃದಯಾಘಾತದಿಂದ ಭುವನೇಶ್ವರದಲ್ಲಿ ಭಾನುವಾರ ನಿಧನ ಹೊಂದಿದರು.
ಅವರಿಗೆ ಇಬ್ಬರು ಪುತ್ರರಿದ್ದಾರೆ.

ಖ್ಯಾತ ಒಡಿಸ್ಸಿ ನೃತ್ಯಗಾರ್ತಿಯಾಗಿದ್ದ, ರಘುನಾಥ ಅವರ ಪತ್ನಿ ಸಂಜುಕ್ತಾ ಪಾಣಿಗ್ರಾಹಿ 1997ರಲ್ಲಿ ನಿಧನರಾದರು. ಪತ್ನಿಯ ಪುಣ್ಯಸ್ಮರಣೆಯ ಮರುದಿನವೇ ರಘುನಾಥ್ ಹೃದಯಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ. ರಘುನಾಥ್ ಅವರು ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

`ಒಡಿಶಾ ಸಂಗೀತ ಪಿತಾಮಹ' ಎಂದೇ ಪ್ರಸಿದ್ಧಿಯಾಗಿದ್ದ ರಘುನಾಥ ಅವರು ಇತ್ತೀಚೆಗಷ್ಟೇ (ಆ. 10) ತಮ್ಮ 79ನೇ ಹುಟ್ಟುಹುಬ್ಬ ಆಚರಿಸಿಕೊಂಡಿದ್ದರು. ತಮ್ಮ ಗಾಯನದ ಮೋಡಿ ಮೂಲಕ ಜಯದೇವ ಕವಿಯ `ಗೀತ ಗೋವಿಂದ' ಕೃತಿಯನ್ನು ಸಂಗೀತ ಪ್ರೇಮಿಗಳ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದ ಅವರು, `ಸುರಮಣಿ' ಎಂಬ ಬಿರುದಿಗೆ ಪಾತ್ರರಾಗಿದ್ದರು. `ಗೀತ ಗೋವಿಂದ'ದ ಗಾಯನಕ್ಕಾಗಿ ಫ್ರೆಂಚ್ ಸರ್ಕಾರದಿಂದ ಗೌರವ ಪಡೆದ ಪ್ರಥಮ ಒಡಿಶಾ ಗಾಯಕ ಅವರಾಗಿದ್ದರು. 2010ರಲ್ಲಿ ರಘುನಾಥ ಅವರು `ಪದ್ಮಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.