ನವದೆಹಲಿ: ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವಲ್ಲಿ ವರ್ಷದುದ್ದಕ್ಕೂ ನಿರಂತರವಾಗಿ ಓದಬೇಕು. ಇದರಲ್ಲಿ ಯಾವುದೇ ಗುಟ್ಟು ಇಲ್ಲ ಎಂದು ಸಿಬಿಎಸ್‌ಇ 12ನೇ ತರಗತಿಯಲ್ಲಿ ಮೊದಲ ಟಾಪರ್ ಸ್ಥಾನ ಪಡೆದಿರುವ ಗಾಜಿಯಾಬಾದ್‌ನ ಮೇಘನಾ ಶ್ರೀವಾಸ್ತವ ಅವರು ತಮ್ಮ ಓದಿ ಕುರಿತು ಹೇಳಿದ್ದಾರೆ.

ಮೇಘನಾ ಶ್ರೀವಾಸ್ತವ 500 ಅಂಕಗಳಿಗೆ 499 ಅಂಕ(ಶೇ 99.8) ಪಡೆದು ಸಾಧನೆ ತೋರಿದ್ದಾರೆ. ಅವರ ಈ ಸಾಧನೆ ಕುರಿತು ಮಾತಿಗೆಳೆದಾಗ ತಮ್ಮ ಓದಿನ ಬಗ್ಗೆ ಹಂಚಿಕೊಂಡ ಅವರು, ನಾನಗೆ ಸಂತಸವಾಗಿದೆ. ಇದನ್ನು ನಾನು ನಿರೀಕ್ಷಿರಲಿಲ್ಲ. ಟಾಪರ್ ಆದ ವಿಷಯದಲ್ಲಿ ಯಾವುದೇ ರಹಸ್ಯ/ಗುಟ್ಟು ಇಲ್ಲ, ಎಲ್ಲರೂ ವರ್ಷಪೂರ್ತಿ ಕಠಿಣ ಪರಿಶ್ರಮ ಹಾಕಿ ಓದಬೇಕು ಮತ್ತು ಸ್ಥಿರ ಮನಸ್ಥಿತಿಯನ್ನು ಹೊಂದಿರಬೇಕು ಎಂದಿದ್ದಾರೆ.

ನಾನು ಅಧ್ಯಯನ ಮಾಡಿದ ಗಂಟೆಗಳ ಸಂಖ್ಯೆಯನ್ನು ಎಂದಿಗೂ ಲೆಕ್ಕ ಹಾಕಿಲ್ಲ. ನನ್ನ ಶಿಕ್ಷಕರು ಮತ್ತು ಪೋಷಕರು ನಿಜವಾಗಿಯೂ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ನನಗೆ ಎಂದಿಗೂ ಒತ್ತಡ ಹಾಕಿಲ್ಲ ಎಂದು ಅವರು ತಮ್ಮ ಒತ್ತಡ ಮುಕ್ತ ಓದಿನ ಬಗ್ಗೆ ಹೇಳಿದ್ದಾರೆ. ಈ ಮೂಲಕ ಪೋಷಕರು ಮಕ್ಕಳಿಗೆ ಕಲಿಕೆ ವಿಷಯದಲ್ಲಿ ಅನಗತ್ಯ ಒತ್ತಡ ಹಾಕಬಾರದು ಎಂಬ ಅಂಶವನ್ನು ಅವರು ಮನವರಿಕೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.