ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ‘ಕ್ಯಾಸ್ಟಿಂಗ್ ಕೌಚ್’ ನಡೆಯುತ್ತಿದೆ ಎಂದು ಶನಿವಾರ ಅರೆನಗ್ನ ಪ್ರತಿಭಟನೆ ನಡೆಸಿದ ನಟಿ ಶ್ರೀರೆಡ್ಡಿ ಅವರ ಸದಸ್ಯತ್ವದ ಅರ್ಜಿ ತಿರಸ್ಕರಿಸಿದ ಸಿನಿಮಾ ಕಲಾವಿದರ ಸಂಘವು (ಎಂಎಎ), ಆಕೆಯೊಂದಿಗೆ ನಟಿಸಿದರೆ ಸದಸ್ಯತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದು ತನ್ನ 900 ಸದಸ್ಯರಿಗೆ ಎಚ್ಚರಿಕೆ ನೀಡಿದೆ.

ಭಾನುವಾರ ತುರ್ತು ಸಭೆ ನಡೆಸಿದ ಸಂಘವು ಈ ನಿರ್ಧಾರ ಕೈಗೊಂಡಿದೆ. ನಂತರ ಮಾತನಾಡಿದ ಅಧ್ಯಕ್ಷ ಶಿವಾಜಿ ರಾಜಾ ಹಾಗೂ ಹಿರಿಯ ನಟ ನರೇಶ್ ಅವರು ಇದೊಂದು ದುರದೃಷ್ಟ ಘಟನೆ ಎಂದು ಹೇಳಿಕೆ ನೀಡಿದ್ದಾರೆ.

‘ಈ ಆವರಣದಲ್ಲಿ ಹಲವಾರು ಘಟನೆಗಳು ನಡೆದಿವೆ. ಆದರೆ, ಅರೆನಗ್ನ ಪ್ರದರ್ಶನವು ಸಂಘದ ಪಾವಿತ್ರತೆ ಹಾಳು ಮಾಡಿದೆ. ನಟಿ ಶ್ರೀರೆಡ್ಡಿ ಅವರು ತೀವ್ರ ನಿರಾಶೆಗೊಂಡಿದ್ದಾರೆ ಎಂದು ನಾವು ಭಾವಿಸುತ್ತೇವೆ’ ಎಂದಿದ್ದಾರೆ.

ಶ್ರೀರೆಡ್ಡಿ ಅವರು ತಮ್ಮ ಸಮಸ್ಯೆಗಳನ್ನು ಸಂಘದ ಪದಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದ್ದಾರೆ.

ಸಂಘದ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನಟಿ ಶ್ರೀರೆಡ್ಡಿ, ನಾನು ಪ್ರಚಾರಕ್ಕೆ ಅರೆನಗ್ನ ಪ್ರತಿಭಟನೆ ನಡೆಸಿಲ್ಲ. ಕೀಳುಮಟ್ಟದ ಪ್ರಚಾರಕ್ಕೂ ಇಳಿದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನಗೂ 60 ಲಕ್ಷ ಅಭಿಮಾನಿಗಳಿದ್ದಾರೆ ಎಂದಿದ್ದಾರೆ.

ಈ ನಡುವೆ ನಟಿ ಹೇಮಾ ಹಾಗೂ ನಟ ಶ್ರೀಕಾಂತ್ ಅವರು ಘಟನೆ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದು, ನಟಿ ವರ್ತನೆಗೆ ಕಿಡಿಕಾರಿದ್ದಾರೆ. ಆದರೆ, ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರು, ನಟಿ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಈ ಮಧ್ಯದಲ್ಲಿಯೇ, ತಮ್ಮದೊಂದಿಗೆ ಲೈಂಗಿಕವಾಗಿ ಸಹಕರಿಸಿದರೆ ಸಿನಿಮಾ ಹಾಗೂ ಟಿ.ವಿ ಷೋಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಇಂಡಿಯನ್ ‘ಐಡಲ್’ ಷೋನಿಂದ ಪ್ರಖ್ಯಾತರಾಗಿದ್ದ ಶ್ರೀರಾಮ್ ಹಾಗೂ ಟಿ.ವಿ. ಕಲಾವಿದ ವಿವಾ ಶ್ರೀಹರ್ಷ ಅವರು ಸಾಮಾಜಿಕ ಜಾಣತಾಣದಲ್ಲಿ ಚಾಟ್ ಮಾಡಿದ್ದರು ಎಂದು ಶ್ರೀರೆಡ್ಡಿ ಆರೋಪಿದ್ದಾರೆ. ಈ ಸಂಬಂಧ ತಮ್ಮ ಪೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ...

ಕಾಸ್ಟಿಂಗ್ ಕೌಚ್: ನಟಿ ಶ್ರೀರೆಡ್ಡಿ ಅರೆನಗ್ನ ಪ್ರತಿಭಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.