ತಿರುವನಂತಪುರಂ:ಮುಲ್ಲಪೆರಿಯಾರ್ ಅಣಕಟ್ಟೆಯನ್ನು ಸಮರ್ಥವಾಗಿ ನಿರ್ವಹಿಸಲು ವಿಫಲವಾದ ತಮಿಳುನಾಡು ಸರ್ಕಾರ ಪ್ರವಾಹಕ್ಕೆ ಕಾರಣಎಂದುಸುಪ್ರೀಂ ಕೋರ್ಟ್ನಲ್ಲಿ ಕೇರಳ ಆರೋಪ ಮಾಡಿದೆ.

ಜಲಾಶಯದ ಸಂಪೂರ್ಣ ಸಂಗ್ರಹ ಸಾಮರ್ಥ್ಯ ಮಟ್ಟ ತಲುಪಿದ ನಂತರಮುಲ್ಲಪೆರಿಯಾರ್ ಅಣಕಟ್ಟೆಯಿಂದ ತಕ್ಷಣ ನೀರು ಬಿಡುಗಡೆ ಮಾಡಿದ್ದರಿಂದ ಪ್ರವಾಹ ಸಂಭವಿಸಿತು. ಇದರಿಂದಾಗಿ 350 ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಕೋಟಿ ನಷ್ಟ ಸಂಭಿವಿಸಿತು ಎಂದು ಕೇರಳ ರಾಜ್ಯ ಮುಖ್ಯಕಾರ್ಯದರ್ಶಿ ಟಾಮ್ ಜೋಸ್ ಅವರು ಗುರುವಾರಅಫಿಡವಿಟ್ ಸಲ್ಲಿಸಿದ್ದಾರೆ.

‘ಪೆರಿಯಾರ್ ಜಲಾನಯನ ಪ್ರದೇಶದಲ್ಲಿಯೇ ಮೂರನೇ ಅತಿದೊಡ್ಡದಾದ ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ತಕ್ಷಣ ನೀರು ಬಿಡುಗಡೆ ಮಾಡಿದ್ದರಿಂದಾಗಿ, ಇಡುಕ್ಕಿ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಬಿಡಬೇಕಾದ ಒತ್ತಡ ಸೃಷ್ಟಿಯಾಯಿತು. ಇದು ಪ್ರವಾಹದ ಪ್ರಮುಖ ಕಾರಣಗಳಲ್ಲೊಂದು’ ಎಂದು ಅಫಿಡವಿಟ್ನಲ್ಲಿಉಲ್ಲೇಖಿಸಲಾಗಿದೆ.

ಪಶ್ಚಿಮಘಟ್ಟಗಳ ಮೇಲಿನ ಪ್ರದೇಶದಲ್ಲಿರುವ ಇಡುಕ್ಕಿ ಜಲಾಶಯದ ಮೇಲಿರುವ ಮುಲ್ಲಪರಿಯಾರ್ ಅಣೆಕಟ್ಟು ಕೇರಳದ ವ್ಯಾಪ್ತಿಯಲ್ಲಿದೆಯಾದರೂ ತಮಿಳುನಾಡು ಸರ್ಕಾರ ಇದನ್ನು ನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.