ಹುಬ್ಬಳ್ಳಿ: ಕಿಮ್ಸ್‌ನ ಮಕ್ಕಳ ವಾರ್ಡ್‌ನಿಂದ ಸೋಮವಾರಅಪಹರಣಕ್ಕೊಳಗಾಗಿದೆ ಎನ್ನಲಾದ40 ದಿನದ ಹೆಣ್ಣು ಮಗು ಮಂಗಳವಾರ ಬೆಳಿಗ್ಗೆ 6ರ ವೇಳೆ ಕಿಮ್ಸ್‌ನ ಪಿಎಂಎಸ್‌ಎಸ್‌ವೈ ಆಸ್ಪತ್ರೆಯ ಹಿಂಭಾಗದಲ್ಲಿ ಪತ್ತೆಯಾಗಿದೆ.

ಆಸ್ಪತ್ರೆಯ ಹಿಂಭಾಗದಲ್ಲಿರುವ ಹಳೇ ಕಟ್ಟಡದಲ್ಲಿದ್ದ ಮಗುವನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ, ಮಗುವನ್ನು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ್ದಾರೆ.

ಮಗು ಅಪಹರಣದ ಕುರಿತು ಗೊಂದಲದ ಹೇಳಿಕೆ ನೀಡಿರುವ ತಾಯಿ ಸಲ್ಮಾ ಶೇಖ್ ಸಮ್ಮುಖದಲ್ಲಿಯೇ, ಕಿಮ್ಸ್ ಆಸ್ಪತ್ರೆ ಹಾಗೂ ಆವರಣದಲ್ಲಿ ಅಳವಡಿಸಿರುವ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿತ್ತು. ಆದರೆ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ತಾಯಿ ವಿಫಲವಾಗಿದ್ದರು. ಸೋಮವಾರ ರಾತ್ರಿ ಅವರನ್ನು ಪೊಲೀಸರು ವಿದ್ಯಾನಗರ ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ಕುಟುಂಬದವರ ಮೊಬೈಲ್ ನಂಬರ್‌ಗಳನ್ನು ಸಿಡಿಆರ್‌ಗೆ ಹಾಕಿ ತನಿಖೆ ನಡೆಸುವುದಾಗಿಯೂ ಹೇಳಿದ್ದರು.

ಬೆಳಿಗ್ಗೆ 6 ಗಂಟೆ ಹೊತ್ತಿಗೆ ಮಗು ಕಿಮ್ಸ್‌ನಲ್ಲಿ ಪತ್ತೆಯಾಗಿದ್ದರೂ, ಅಲ್ಲಿರುವ ಯಾವುದೇ ಸಿಸಿಟಿವಿ ಕ್ಯಾಮೆರಾಗಳಲ್ಲಿ ಮಗುವನ್ನು ಬಿಟ್ಟು ಹೋಗಿರುವ ದೃಶ್ಯಾವಳಿ ಸೆರೆಯಾಗಿಲ್ಲ. ಮಗುವನ್ನು ಎತ್ತಿಕೊಂಡು ಹೋಗಿರುವ ಹಾಗೂ ಮರಳಿ ಬಿಟ್ಟಿರುವ ಯಾವ ದೃಶ್ಯಗಳು ಯಾವ ಕ್ಯಾಮೆರಾಗಳಲ್ಲಿಯೂಸೆರೆಯಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಕಿಮ್ಸ್ ಸಿಬ್ಬಂದಿ ಅಥವಾ ಮಗುವಿನ ಕುಟುಂಬದವರ ಪಾತ್ರವಿದೆಯೇ ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಕಿಮ್ಸ್‌ನಲ್ಲಿ ಮಗು ಅಪಹರಣ: ಆರೋಪ

ಈ ಕುರಿತು ಪ್ರತಿಕ್ರಿಯಿಸಿದ ಕಮಿಷನರ್ ಲಾಭೂರಾಮ್, ‘ಮಗು ಪತ್ತೆಯಾಗಿದ್ದು, ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕರಣದ ಹಿಂದೆ ಯಾರ‍್ಯಾರು ಇದ್ದಾರೆ ಎನ್ನುವ ಕುರಿತು ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.

ಮಗುವಿನ ದೇಹದ ಮೇಲೆ ಗೀಚಿದ ಗಾಯಗಳು ಕಂಡುಬಂದಿವೆ. 24 ಗಂಟೆ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗುವುದು. ನಂತರ ಪಾಲಕರಿಗೆ ಒಪ್ಪಿಸುತ್ತೇವೆ.
–ಡಾ. ರಾಮಲಿಂಗಪ್ಪ ಅಂಟರತಾನಿ, ನಿರ್ದೇಶಕ, ಕಿಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.