ಶ್ರವಣಬೆಳಗೊಳ (ಹಾಸನ ಜಿಲ್ಲೆ): ಶ್ರವಣಬೆಳಗೊಳಕ್ಕೆ ತಂದ 12 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾನುವಾರ ರಾತ್ರಿ ಸ್ವಾಗತಿಸಿದರು.

ನಂತರ ಮಾತನಾಡಿದ ಅವರು, ‘ಶ್ರವಣಬೆಳಗೊಳಕ್ಕೆ ಬರುವ ಭಕ್ತರೆಲ್ಲರಿಗೂ ಬೆಟ್ಟ ಹತ್ತಿ 58.8 ಅಡಿ ಎತ್ತರದ ಬಾಹುಬಲಿ ದರ್ಶನ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ 12 ಅಡಿ ಎತ್ತರದ ಮೂರ್ತಿಯನ್ನು ಮಠದ ಬಳಿ ಸ್ಥಾಪಿಸಲಾಗುವುದು. ಇದರಿಂದ ಪ್ರತಿಯೊಬ್ಬರಿಗೂ ದರ್ಶನ ಭಾಗ್ಯ ದೊರೆಯುತ್ತದೆ’ ಎಂದು ಅವರು ಹೇಳಿದರು.

ಮೂರ್ತಿಯು 10 ಅಡಿ 1 ಇಂಚು ಎತ್ತರವಿದ್ದು, ಕಮಲ ಪೀಠದಿಂದ ಒಟ್ಟು 12 ಅಡಿ ಎತ್ತರದ ಮೂರ್ತಿಯಾಗಿದೆ. ಈ ಮೂರ್ತಿಯನ್ನು ದಾನಿ ಮಹಾವೀರ ಪ್ರಸಾದ್ ಜೈನ್ ಅವರು ತಮ್ಮ ತಂದೆಯ ಇಚ್ಛೆಯಂತೆ ಶ್ರವಣಬೆಳಗೊಳದಲ್ಲಿ ಪ್ರತಿಷ್ಠಾಪಿಸಲಿದ್ದಾರೆ. ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯನ್ನೇ ಇದು ಹೋಲುತ್ತಿದ್ದು, ಕಲಾವಿದರು ಇದರ ಕೆತ್ತನೆಗೆ 6 ತಿಂಗಳು ಕಾಲಾವಧಿ ತೆಗೆದುಕೊಂಡಿದ್ದಾರೆ.

ಶಿಲ್ಪಿಗಳಾದ ರಾಮನಗರ ತಾಲ್ಲೂಕು ಬಿಡದಿಯ ಅಶೋಕ್ ಗುಡಿಗಾರ್, ಗೌತಮ್ ಕುಮಾರ್ ಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.