ಬೆಂಗಳೂರು: ವಿವಿಧ ನೇಮಕಾತಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಎಲ್ಲ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇನ್ನು ಮುಂದೆ ಮೊಬೈಲ್ ನಂಬರ್ ಇರುವ ಆಧಾರ್ ಕಾರ್ಡ್ ಲಗತ್ತಿಸುವುದು ಕಡ್ಡಾಯ.

ಪರೀಕ್ಷಾ ಅಕ್ರಮ ತಡೆಯಲು ಕೃತಕ ಬುದ್ಧಿಮತ್ತೆ ಅಳವಡಿಕೆ, ಸಿಟಿಟಿವಿ ಕ್ಯಾಮೆರಾ ಕಣ್ಗಾವಲು ಮತ್ತಿತರ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಕೆಇಎ, ಈಗ ಅಭ್ಯರ್ಥಿಗಳಿಗೆ ಆಧಾರ್ ಕಡ್ಡಾಯ ಮಾಡಲು ಅನುಮತಿ ಕೋರಿ ಇ-ಆಡಳಿತ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಹೆಚ್ಚಿನ ವಿದ್ಯಾರ್ಥಿಗಳು ಸೈಬರ್ ಕೆಫೆಗಳಿಗೆ ತೆರಳಿ ನೇಮಕಾತಿ ಪರೀಕ್ಷೆ ಅಥವಾ ಸಿಇಟಿಗೆ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಭರ್ತಿ ಮಾಡುವವರು ಒಂದೇ ಮೊಬೈಲ್ ಸಂಖ್ಯೆ ಬಳಸುತ್ತಾರೆ. ಈ ಸಂಖ್ಯೆಗಳು ಸೈಬರ್ ಕೆಫೆ ಮಾಲೀಕರು ಅಥವಾ ಮಧ್ಯವರ್ತಿಗಳಿಗೆ ಸೇರಿರುತ್ತವೆ. ಒಟಿಪಿ ಪಡೆಯುವ ಅವರು ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಆಧಾರ್ ಬಳಕೆಯ ಚಿಂತನೆ ಮಾಡಲಾಗಿದೆ ಎಂದು ಕೆಇಎ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.