ಚಿಕ್ಕಮಗಳೂರು: ಪುತ್ರಿ ಅಮೂಲ್ಯಾ ‘ಪಾಕಿಸ್ತಾನಕ್ಕೆ ಜಿಂದಾಬಾದ್’ ಎಂದು ಕೂಗಿರುವುದು ಖಂಡಿತಾ ತಪ್ಪು, ಅವಳು ಜೈಲಿನಲ್ಲಿಯೇ ಇರಲಿ ಎಂದು ಅಮೂಲ್ಯಾ ತಂದೆ ವೊಜಲ್ಡ್ ಹೇಳಿದ್ದಾರೆ.

ಗುರುವಾರ ರಾತ್ರಿ ಮನೆಗೆ ಬಂದಿದ್ದ ಬಜರಂಗದಳದ ಕಾರ್ಯಕರ್ತರೊಂದಿಗೆ ವೊಜಲ್ಡ್ ಮಾತನಾಡಿ, ‘ಭಾರತ್ ಮಾತಾ ಕಿ ಜೈ… ಭಾರತ್ ಮಾತಾ ಕಿ ಜೈ … ಪೊಲೀಸರು ಪುತ್ರಿಯ ಕೈಕಾಲು ಮುರಿಯಲಿ, ನಮ್ಮದೇನು ಅಭ್ಯಂತರ ಇಲ್ಲ’ ಎಂದಿದ್ದಾರೆ.

ಇದನ್ನೂ ಓದಿ...ಬೆಂಗಳೂರಿನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಯುವತಿ

‘ಅಮೂಲ್ಯಾ ಈ ರೀತಿ ಮಾತಾಡಬಾರದು ಎಂದು ಹೇಳಿದ್ದೆ. ವಿದೇಶದಿಂದ ಬಂದಿದ್ದ ನನ್ನನ್ನ ತಮ್ಮನೂ ಬುದ್ಧಿವಾದ ಹೇಳಿದ್ದ. ಆಕೆ ಕೇಳುತ್ತಿರಲಿಲ್ಲ. ಕುಟುಂಬದವರಿಗೆ ಬಹಳ ಬೇಸರ ಮಾಡಿಸಿದ್ದಾಳೆ. ಪುತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ’ ಎಂದು ಹೇಳಿದ್ದಾರೆ.

ಬಜರಂಗದಳವರು ಅಮೂಲ್ಯಾ ಮನೆಗೆ ಹೋಗಿ ವೊಜಲ್ಡ್ ಅವರ ಜತೆ ಮಾತುಕತೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ...‘ಪಾಕಿಸ್ತಾನ ಜಿಂದಾಬಾದ್’ ಕೂಗಿದ್ದು ಕಾಫಿನಾಡಿನ ಗುಬ್ಬಗದ್ದೆ ಯುವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.