ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನಮಂಡಲ ಅಧಿವೇಶನ | ‘ಸ್ಮಾರಕ’ಗಳ ನಿರ್ವಹಣೆ: ಖಾಸಗಿಗೆ ದತ್ತು

Published 25 ಜುಲೈ 2024, 15:18 IST
Last Updated 25 ಜುಲೈ 2024, 15:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿರುವ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳನ್ನು ಖಾಸಗಿಯವರಿಗೆ ದತ್ತು ನೀಡಲು ಸರ್ಕಾರ ನಿರ್ಧರಿಸಿದೆ.

ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು, ಪುರಾತತ್ವ ಸ್ಥಳಗಳ ಅವಶೇಷಗಳ ಅಧಿನಿಯಮ– 1963ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ಮಂಡಿಸಿ, ಸರ್ಕಾರ ಒಪ್ಪಿಗೆ ಪಡೆದುಕೊಂಡಿದೆ.

ಕಂಪನಿ, ಸೀಮಿತ ಹೊಣೆಗಾರಿಗೆ ಸಹಭಾಗಿತ್ವ ಸಂಸ್ಥೆ (ಎಲ್‌ಎಲ್‌ಪಿ), ಪಾಲುದಾರಿಕೆ ಕಂಪನಿ, ಆಸಕ್ತಿಯುಳ್ಳ ಸೊಸೈಟಿಗಳು, ಸಹಕಾರ ಸಂಘಗಳು, ಟ್ರಸ್ಟ್‌ಗಳು, ಸರ್ಕಾರೇತರ ಸಂಸ್ಥೆಗಳು, ಆಸಕ್ತಿಯುಳ್ಳ ವ್ಯಕ್ತಿಗಳು ಅವರ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಕಾರ್ಯಕ್ರಮಗಳಡಿ ರಾಜ್ಯದಲ್ಲಿರುವ ಸ್ಮಾರಕಗಳನ್ನು ದತ್ತು ಪಡೆಯಬಹುದು. ದತ್ತು ಪಡೆದವರನ್ನು ‘ಸ್ಮಾರಕ ಮಿತ್ರರು’ ಎಂಬ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

‘ಸ್ಮಾರಕ ಮಿತ್ರರು’ ಸ್ಮಾರಕಗಳ ರಕ್ಷಣೆ, ಜೀರ್ಣೋದ್ಧಾರ, ವಾರ್ಷಿಕ ನಿರ್ವಹಣೆ, ಪ್ರವಾಸಿಗರಿಗೆ ಮೂಲ ಮತ್ತು ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ.

ಸಂರಕ್ಷಿತ ಸ್ಮಾರಕದಿಂದ ಯಾವುದೇ ಶಿಲ್ಪ, ಕೆತ್ತನೆ, ಪ್ರತಿಮೆ, ಅರೆಯುಬ್ಬು ಚಿತ್ರ, ಶಾಸನಗಳಿಗೆ ಧಕ್ಕೆ ಮತ್ತು ಅಂತಹ ಯಾವುದೇ ವಸ್ತುವನ್ನು ಸ್ಥಾನಪಲ್ಲಟಗೊಳಿಸಿದರೆ ಅವರಿಗೆೆ ಎರಡು ವರ್ಷಗಳ ಶಿಕ್ಷೆ ಹಾಗೂ ₹1 ಲಕ್ಷದವರಗೆ ದಂಡ ವಿಧಿಸಲು ಮಸೂದೆಗೆ ತಿದ್ದುಪಡಿ ತರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT