ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 2024ರ ಜ. 1ರಿಂದ ಪೂರ್ವಾನ್ವಯವಾಗುವಂತೆ ಗೌರವಧನ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

ಸೇವಾನುಭವ ಮತ್ತು ವಿದ್ಯಾರ್ಹತೆ ಪರಿಗಣಿಸಿ ಗೌರವಧನವನ್ನು ₹ 31 ಸಾವಿರದಿಂದ ₹ 40 ಸಾವಿರವರೆಗೆ ಹೆಚ್ಚಿಸಲಾಗಿದೆ.

ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ ₹ 31 ಸಾವಿರ, ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿವರಿಗೆ ₹ 35 ಸಾವಿರ, ಐದು ವರ್ಷದಿಂದ 10 ವರ್ಷ ಸೇವಾನುಭವ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ ₹ 34 ಸಾವಿರ, ಐದು ವರ್ಷದಿಂದ 10 ವರ್ಷ ಸೇವಾನುಭವ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ ₹ 38 ಸಾವಿರ, 10 ವರ್ಷದಿಂದ 15 ವರ್ಷ ಸೇವಾನುಭವ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ ₹ 35 ಸಾವಿರ, 10 ವರ್ಷದಿಂದ 15 ವರ್ಷ ಸೇವಾನುಭವ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ ₹ 39 ಸಾವಿರ, 15 ವರ್ಷಕ್ಕಿಂದ ಹೆಚ್ಚಿನ ಸೇವಾನುಭವ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ ₹ 36 ಸಾವಿರ, 15 ವರ್ಷಕ್ಕಿಂತ ಹೆಚ್ಚಿನ ಸೇವಾನುಭವ, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ ₹ 40 ಸಾವಿರ ಗೌರವಧನ ಸಿಗಲಿದೆ.

ಇಡುಗಂಟು: 60 ವರ್ಷ ಮೀರಿದ ಅತಿಥಿ ಉಪನ್ಯಾಸಕರಿಗೆ ಭದ್ರತಾ ರೂಪದಲ್ಲಿ ವಾರ್ಷಿಕ ₹ 50 ಸಾವಿರದಂತೆ ಗರಿಷ್ಠ ₹ 5 ಲಕ್ಷ ಮೊತ್ತದ ಇಡುಗಂಟು ಸೌಲಭ್ಯವೂ ಸಿಗಲಿದೆ.

ವಿಮೆ ಸೌಲಭ್ಯ: ವಾರ್ಷಿಕ ₹ 5 ಲಕ್ಷವರೆಗೆ ಆರೋಗ್ಯ ವಿಮೆ ಸೌಲಭ್ಯ ನೀಡಲು, ಅತಿಥಿ ಉಪನ್ಯಾಸಕರಿಂದ ವಂತಿಗೆಯಾಗಿ ₹ 400, ಸರ್ಕಾರದಿಂದ ₹ 400 ಸೇರಿಸಿ ಒಟ್ಟು ₹ 800 ಸಂಗ್ರಹಿಸಿ ವಿಮೆ ಸೌಲಭ್ಯ ಜಾರಿಗೆ ಮಂಜೂರಾತಿ ನೀಡಲಾಗಿದೆ.

ತಾಂತ್ರಿಕ ಶಿಕ್ಷಣ ಇಲಾಖೆ:

ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್, ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸಿರುವ ಅತಿಥಿ ಉಪನ್ಯಾಸಕರ ಗೌರವಧನವನ್ನೂ ಹೆಚ್ಚಿಸಲಾಗಿದೆ.

5 ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿವರಿಗೆ ₹ 5 ಸಾವಿರ, 5ರಿಂದ 10 ವರ್ಷ ಸೇವಾನುಭವ ಇರುವವರಿಗೆ ₹ 6 ಸಾವಿರ, 10ರಿಂದ 15 ವರ್ಷ ಸೇವಾನುಭವ ಇದ್ದರೆ ₹ 7 ಸಾವಿರ, 15 ವರ್ಷಕ್ಕೂ ಹೆಚ್ಚು ಸೇವಾನುಭವ ಹೊಂದಿದ್ದರೆ ₹ 8 ಸಾವಿರ ಗೌರವಧನ ಹೆಚ್ಚಿಸಲಾಗಿದೆ. 60 ವರ್ಷ ಮೀರಿದ ಈ ಅತಿಥಿ ಉಪನ್ಯಾಸಕರಿಗೂ ಭದ್ರತಾ ರೂಪದಲ್ಲಿ ವಾರ್ಷಿಕ ₹ 50 ಸಾವಿರದಂತೆ ಗರಿಷ್ಠ ₹ 5 ಲಕ್ಷ ಮೊತ್ತದ ಇಡುಗಂಟು ಮತ್ತು ವಿಮೆ ಸೌಲಭ್ಯ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.