ಕಾರವಾರ: ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನಾಲಾಯಕ್, ಲೋಫರ್ ಎಂದು ಈ ಹಿಂದೆ ಹೇಳಿಕೆ ನೀಡಿದ್ದೆ. ಅದನ್ನು ನಾನುಮತ್ತೆ ಸಮರ್ಥಿಸಿಕೊಳ್ಳುತ್ತಿದ್ದೇನೆ. ಅವರು ರಾಜಕೀಯಕ್ಕೆ ಸೇವೆ ಮಾಡಲು ಬಂದಿಲ್ಲ ಎನ್ನುವುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ’ ಎಂದು ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ವಾಗ್ದಾಳಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜಸೇವೆಯೇ ರಾಜಕೀಯದ ಬುನಾದಿ. ಅನಂತಕುಮಾರ ಸಮಾಜಸೇವೆ ಮಾಡಲುಬಂದಿಲ್ಲ ಎಂದು ಹೇಳುತ್ತಿದ್ದಾರೆ.ಜಗತ್ತಿಗೆ ಸುದ್ದಿ ತಲುಪಿಸುವ ಮಾಧ್ಯಮದವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಏನು ಬೇಕಾದರೂ ಬರೆಯುವುದುಮಾಧ್ಯಮದವರಕೆಲಸಾನಾ? ಅನಂತಕುಮಾರ್ ಮಾಧ್ಯಮ ರಂಗಕ್ಕೆ ಅಪಚಾರಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅಂಕೋಲಾದಲ್ಲಿ ಪಾಸ್‌ಪೋರ್ಟ್ ಸೇವಾಕೇಂದ್ರವನ್ನು ಆರಂಭಿಸುವುದಾಗಿ ಅವರು ನಿನ್ನೆ ಶಿರಸಿಯಲ್ಲಿ ಹೇಳಿದ್ದಾರೆ. ಅವರಿಗೆ ತಾಕತ್ತಿದ್ದರೆ ಐದು ತಿಂಗಳಲ್ಲಿ ಶಂಕುಸ್ಥಾಪನೆ ಮಾಡಲಿ ನೋಡೋಣ’ ಎಂದು ಸವಾಲೆಸೆದರು.

‘ಹಿಂದುಳಿದ ವರ್ಗದ ಯುವಕರ ಕೈಗೆ ಕತ್ತಿ ಕೊಟ್ಟಿದ್ದಾರೆ. ಆಯುವಕರ ಮೇಲಿರುವ ಪ್ರಕರಣಗಳ ಬಗ್ಗೆ ಅವರೀಗ ಮಾತನಾಡುತ್ತಿಲ್ಲ.ಅವರ ರಾಜಕಾರಣ ಪರೇಶ್ ಮೇಸ್ತನ ಸಾವಿನ ಮೇಲೆ ನಡೆಯುತ್ತಿದೆ. ಆ ಕೊಲೆಯ ತನಿಖೆ ಸಿಬಿಐನಿಂದ ಇನ್ನೂ ಆಗಿಲ್ಲ. ಲೋಕಸಭಾ ಚುನಾವಣೆಗೂ ಅವನ ಸಾವಿನ ವಿಚಾರವನ್ನೇಬಳಸಿಕೊಳ್ಳುತ್ತಾರೆ. ಅವರಿಗೆ ಈ ಬಾರಿ ಅವಕಾಶ ಕೊಡಬಾರದು. ಈ ಬಾರಿಯಾದರೂ ಎಲ್ಲರೂ ಒಟ್ಟಾಗಿ ಬುದ್ಧಿ ಕಲಿಸಬೇಕು. ಸಮಾಜಸೇವೆ ಮಾಡುವ ವ್ಯಕ್ತಿ ನಮಗೆ ಬೇಕು’ ಎಂದು ಪ್ರತಿಪಾದಿಸಿದರು.

‘ಸಂಸದರಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಸಮಿತಿಯಿದೆ. ಐದು ವರ್ಷಗಳಲ್ಲಿ ಅವರು ಎಷ್ಟು ಸಭೆ, ಎಷ್ಟು ಸಮೀಕ್ಷೆ ಮಾಡಿದ್ದಾರೆ? ಅನಂತಕುಮಾರ ಹೆಗಡೆಯನ್ನುರಾಜಕೀಯದಿಂದಲೇ ಹೊರ ಹಾಕಬೇಕು. ಈ ಸಾರಿ ಬದಲಾವಣೆ ತರಬೇಕು’ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.