ಬೆಂಗಳೂರು: ಅಟಲ್ಜೀ ಜನಸ್ನೇಹಿ ಕೇಂದ್ರಗಳಲ್ಲಿ ವಿತರಿಸಲಾಗುವ ವಿವಿಧ ಪ್ರಮಾಣಪತ್ರಗಳ ಬಳಕೆದಾರರ ಶುಲ್ಕವನ್ನು ಫೆ. 7ರಿಂದಲೇ ಅನ್ವಯವಾಗುವಂತೆ ಹೆಚ್ಚಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ನೇರವಾಗಿ ಕೇಂದ್ರಗಳಿಗೆ ಭೇಟಿ ನೀಡಿ ಜಾತಿ, ಆದಾಯ ಪ್ರಮಾಣಪತ್ರ, ಆರ್ಟಿಸಿ ಸೇರಿದಂತೆ ಇತರೆ ಪ್ರಮಾಣಪತ್ರ ಪಡೆಯಲು ಹಾಲಿ ಇರುವ ಶುಲ್ಕವನ್ನು (ಪ್ರತಿ ಪ್ರಮಾಣಪತ್ರಕ್ಕೆ) ₹ 25ರಿಂದ ₹ 40ಕ್ಕೆ ಹೆಚ್ಚಿಸಲಾಗಿದೆ.

ನಾಗರಿಕರು ಅಂಚೆ ಅಥವಾ ತ್ವರಿತ ಅಂಚೆ ಮೂಲಕ ಪಡೆಯಲು ಇಚ್ಛಿಸಿದರೆ ಅದಕ್ಕೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ. ಸಾಧಾರಣ ಅಂಚೆ ಮೂಲಕ ಪಡೆಯಲು ₹ 45 (ಅಂಚೆ ಶುಲ್ಕ ₹ 5 ಸೇರಿ), ನೋಂದಾಯಿತ ಅಂಚೆಗೆ ₹ 60(ಅಂಚೆ ಶುಲ್ಕ ₹ 20 ಸೇರಿ) ಮತ್ತು ತ್ವರಿತ ಅಂಚೆಗೆ ₹ 70 (ಅಂಚೆ ಶುಲ್ಕ ₹ 30 ಸೇರಿ) ಶುಲ್ಕ ನಿಗದಿಪಡಿಸಲಾಗಿದೆ.

ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯದ ಅಡಿಯಲ್ಲಿರುವ ನಾಡ ಕಚೇರಿಗಳಲ್ಲಿ ಸಾರ್ವಜನಿಕರಿಗೆ 11 ಸೇವಾ ಶುಲ್ಕರಹಿತ, 43 ಸೇವಾ ಶುಲ್ಕ ಸಹಿತ ಅರ್ಜಿಗಳ ಸೇರಿ ಒಟ್ಟು 54 ಸೇವೆಗಳನ್ನು ನೀಡಲಾಗುತ್ತಿದೆ.

2006 ರಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಇ-ಆಡಳಿತ ಇಲಾಖೆ ಅನುಷ್ಠಾನಗೊಳಿಸಿದ್ದ ‘ನೆಮ್ಮದಿ’ ಯೋಜನೆಯನ್ನು 2012 ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ–ಆಡಳಿತ) ಕಂದಾಯ ಇಲಾಖೆಗೆ ವರ್ಗಾಯಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಪ್ರಮಾಣಪತ್ರಗಳಿಗೆ ನಿಗದಿಪಡಿಸಿದ್ದ ಶುಲ್ಕ ₹ 15 ಅನ್ನು ₹ 25ಕ್ಕೆ ಹೆಚ್ಚಿಸಲಾಗಿತ್ತು. ಬಳಕೆದಾರರ ಶುಲ್ಕದಿಂದ ತಾಂತ್ರಿಕ ಸಂಪನ್ಮೂಲಗಳನ್ನು ನೇಮಿಸುವ ವೆಚ್ಚ, ಡೇಟಾ ಎಂಟ್ರಿ ಆಪರೇಟರ್ಗಳು, ಹಾರ್ಡ್ವೇರ್, ಸ್ಟೇಷನರಿ ಮತ್ತು ಇತರೆ ವೆಚ್ಚಗಳು, ಬಿಎಸ್ಎನ್ಎಲ್ ಅಂತರ್ಜಾಲ ಸಂಪರ್ಕ, ಮೊಬೈಲ್ ಶುಲ್ಕಗಳು ಮತ್ತು ಇತರ ಖರ್ಚುಗಳನ್ನು ನಿರ್ವಹಿಸಲಾಗುತ್ತದೆ. ಹೀಗಾಗಿ, ಶುಲ್ಕವನ್ನು ಹೆಚ್ಚಿಸಲು ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು.

ವಿವಿಧ ಸೇವೆಗಳನ್ನು ಒದಗಿಸಲು ರಾಜ್ಯದಾದ್ಯಂತ ಹೋಬಳಿ ಮಟ್ಟದಲ್ಲಿ 769 ಅಟಲ್ಜೀ ಜನಸ್ನೇಹಿ ಕೇಂದ್ರ
ಗಳು, 122 ಸ್ವಾಗತ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಜಾತಿ, ಆದಾಯ, ವಾಸ ಸ್ಥಳ ದೃಢೀಕರಣ, ಆರ್ಟಿಸಿ ಹಾಗೂ ಭೂಮಿ ಸೇವೆಗಳಿಗೆ ಸಂಬಂಧಿಸಿದ ಇತರ ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.