ಕಲಬುರ್ಗಿ: ಅಧಿಕಾರ ಹಾಗೂ ಹಣದ ಆಮಿಷ ಒಡ್ಡಿದ್ದಾರೆಎಂದು ವಿಧಾನಸಭೆವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಆಡಿಯೊಪ್ರಕರಣದ ತನಿಖೆಗೆಹೈಕೋರ್ಟ್ನ ಕಲಬುರ್ಗಿ ಪೀಠ ಶುಕ್ರವಾರ ಮಧ್ಯಂತರ ತಡೆ ನೀಡಿತು.

ಹೀಗಾಗಿ ಬಿ.ಎಸ್.ಯಡಿಯೂರಪ್ಪ,ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ, ಹಾಸನ ಶಾಸಕ ಪ್ರೀತಂಗೌಡ ಹಾಗೂ ಪತ್ರಕರ್ತ ಎಂ.ಬಿ.ಮರಮಕಲ್ ಸದ್ಯಕ್ಕೆ ನಿರಾಳರಾಗಿದ್ದಾರೆ.

ಈ ನಾಲ್ವರ ವಿರುದ್ಧಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ದೇವದುರ್ಗ ಠಾಣೆಗೆ ಫೆ.13ರಂದು ದೂರು ನೀಡಿದ್ದರು. ಈ ದೂರು ಆಧರಿಸಿ ದೇವದುರ್ಗ ಠಾಣೆಯಲ್ಲಿ ಪೊಲೀಸರು ಎಫ್ಐಆರ್ ಹಾಕಿದ್ದರು.

ತಮ್ಮ ಮೇಲಿನಎಫ್ಐಆರ್ ರದ್ದು ಕೋರಿ ಈ ನಾಲ್ವರುರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಪಿ.ಜಿ.ಎಂ. ಪಾಟೀಲ ಅವರಿದ್ದ ಹೈಕೋರ್ಟ್ ಪೀಠ, ಎಫ್ಐಆರ್ ದಾಖಲಾದ ಬಳಿಕ ನಡೆಯುವ ಎಲ್ಲ ಬೆಳವಣಿಗೆಗಳಿಗೆ ತಡೆಯಾಜ್ಞೆ ನೀಡಿತು.

‘ಎಫ್ಐಆರ್ ರದ್ದತಿಗೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ಬಾಕಿ ಇದೆ. ದೂರುದಾರ ಶರಣಗೌಡ ಕಂದಕೂರ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಶರಣಗೌಡ ಅವರು ತಮ್ಮ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಿ ವಾದ ಮಂಡಿ
ಸಬೇಕು. ವಾದ–ಪ್ರತಿವಾದ ಆಲಿಸಿದ ಬಳಿಕ ಮತ್ತೆ ಪ್ರಕರಣದ ವಿಚಾರಣೆ ನಡೆಯುತ್ತದೆ. ಆ ಬಳಿಕ ಎಫ್ಐಆರ್ ರದ್ದು ಮಾಡಬೇಕೋ, ಬೇಡವೋ ಎಂಬ ಬಗ್ಗೆ ತೀರ್ಪು ನೀಡಲಿದೆ’ ಎಂದು ಯಡಿಯೂರಪ್ಪ ಪರ ವಕೀಲ ಸಂಜಯ್ ಕುಲಕರ್ಣಿ ತಿಳಿಸಿದರು.

‘ದ್ವೇಷದ ರಾಜಕೀಯ ಬೇಡ’
‘ನನಗೆ ನ್ಯಾಯಾಲಯ ಮತ್ತು ದೇವರ ಮೇಲೆ ನಂಬಿಕೆ ಇದೆ. ಹೈಕೋರ್ಟ್ ತೀರ್ಪುನಿಂದ ಸಂತಸವಾಗಿದ್ದು, ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ಯಡಿಯೂರಪ್ಪ ಅವರು ಬೀದರ್ ಜಿಲ್ಲೆ ಹುಮನಾಬಾದ್ನಲ್ಲಿ ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿಯಾಗಿದ್ದಾಗ ನಾನೆಂದೂ ದ್ವೇಷದ ರಾಜಕೀಯ ಮಾಡಿ ರಲಿಲ್ಲ. ದ್ವೇಷದ ರಾಜಕಾರಣವನ್ನು ಯಾರೂ ಮಾಡಬಾರದು’
ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.