ಶಿವಮೊಗ್ಗ:ಆಡಿಯೊ ಪ್ರಕರಣ ಬಿಎಸ್‌ವೈಗೆ ಮುಜುಗರ ತಂದಿರುವುದು ನಿಜ. ಶರಣಗೌಡ ಅವರ ಜತೆ ಮಾತನಾಡಿದ್ದು ತಪ್ಪು. ಹಾಗಂತ ಅಧಿಕಾರ ಹಿಡಿಯುವ ತನಕ ಸುಮ್ಮನೆ ಕೂರುವುದಿಲ್ಲ ಎಂದು ವಿಧಾನ ಪರಿಷತ್ ಆಯನೂರು ಮಂಜುನಾಥ್ ಹೇಳಿದರು.

ಬಿಜೆಪಿಯ 104 ಜನ ಶಾಸಕರು ಇದ್ದಾರೆ. 38 ಶಾಸಕರಿವವವರು ಅಧಿಕಾರ ಅನುಭವಿಸಬಹುದಾದರೆ ಬಿಜೆಪಿ ಅಧಿಕಾರ ಹಿಡಿಯಲು ಪ್ರಯತ್ನಿಸಿದರೆ ತಪ್ಪೇನು ತಪ್ಪೇನು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಹಾಗಾದರೆ ಆಪರೇಷನ್ ಕಮಲ ಮುಂದುವರಿಸುವಿರಾ ಎಂಬ ಪ್ರಶ್ನೆಗೆ ಗರಂ ಆದ ಆಯನೂರು, ಆಪರೇಷನ್ ಕಮಲ ಎಂದು ಏಕೆ ಕರೆಯುತ್ತೀರಿ? ಅಧಿಕಾರ ಹಿಡಿಯಲು ಅಂತಹ ಪ್ರಯತ್ನ ಸಹಜ ಎಂದು ಸಮರ್ಥಿಸಿಕೊಂಡರು.

ಆಡಿಯೊ ಪ್ರಕರಣ ಎಸ್ಐಟಿಗೆ ನೀಡಬಾರದು ಎಂಬುದು ಬಿಜೆಪಿ ನಿಲುವು. ಎಸ್ಐಟಿ ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ನಡೆದುಕೊಳ್ಳುವ ಸಂಸ್ಥೆ. ವಿಧಾನ ಸಭಾಧ್ಯಕ್ಷರು ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದಿತ್ತು ಎಂದರು.

ಆಡಿಯೊದಲ್ಲಿ ಹಣದ ವ್ಯವಹಾರ ನಡೆದಿಲ್ಲ. ಕೇವಲ ಪ್ರಸ್ತಾಪ ಆಗಿದೆ. ಸಚಿವ ಪುಟ್ಟರಂಗ ಶೆಟ್ಟಿ ಅವರ ಕಚೇರಿ ಸಹಾಯಕ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ. ಅದು ಸಚಿವರಿಗೆ ನೀಡಬೇಕಾದ ಹಣ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ಇಲ್ಲಿ ಏನಾಯಿತು ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.