ವಿಧಾನಸಭೆ: ವರ್ಷದಲ್ಲಿ 10 ದಿನ ಕಲಾಪ ನಡೆಯುವುದರಿಂದ ಸುವರ್ಣ ವಿಧಾನಸೌಧವು ‘ಟೂರಿಂಗ್ ಟಾಕೀಸ್’ ರೀತಿಯಾಗಿದೆ ಎಂದು ಬಿಜೆಪಿಯ ಅಭಯ ಪಾಟೀಲ ಹೇಳಿದರು.

ಉತ್ತರ ಕರ್ನಾಟಕದ ಸಮಸ್ಯೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಕಲಾಪ ನಡೆಯುವ ವೇಳೆ ಕೆಲವು ಶಾಸಕರು ಗೋವಾ ಮತ್ತು ದೇವಸ್ಥಾನಗಳ ಸುತ್ತಾಟದಲ್ಲೇ ನಿರತರಾಗಿರುತ್ತಾರೆ. ಸುವರ್ಣಸೌಧ ನಿರ್ಮಾಣದ ಆಶಯ ಈಡೇರುತ್ತಿಲ್ಲ ಎಂದರು.

‘ಗೋವಾಕ್ಕೆ ಹೋಗುವ ರಸ್ತೆಗಳ ಗಡಿಯಲ್ಲಿ ಶಾಸಕರನ್ನು ನಿರ್ಬಂಧಿಸಿ, ಅಲ್ಲಿಂದಲೇ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಿ’ ಎಂದು ಬಿಜೆಪಿಯ ಎಸ್.ಆರ್. ವಿಶ್ವನಾಥ್ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ‘ನಮ್ಮ ಸ್ವಾಭಿಮಾನದ ಶಕ್ತಿ ಕೇಂದ್ರ ಇದು. ಇದನ್ನು ಕಟ್ಟುವ ಹಿಂದೆ ಬೇರೆ ಬೇರೆ ಉದ್ದೇಶಗಳೂ ಇದ್ದವು. ಕಟ್ಟಿದ ಮೇಲೆ ಸಮಸ್ಯೆಗಳು ಕಡಿಮೆಯಾಗಿದ್ದು, ಅಭಿವೃದ್ಧಿಯೂ ಆಗಿದೆ. ಈಗ ಏನು ಮಾಡಬೇಕು ಹೇಳಿ’ ಎಂದರು.

ಮಾತು ಮುಂದುವರಿಸಿದ ಅಭಯ ಪಾಟೀಲ, ಸರ್ಕಾರಿ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಬೇಕು. ವಿಧಾನಮಂಡಲದ ಸಮಿತಿಗಳ ಸಭೆಗಳನ್ನು ಇಲ್ಲಿಯೇ ನಡೆಸಿ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.