ಬೆಂಗಳೂರು: ಯುವತಿಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಬ್ ಚಾಲಕ ದೇವರಾಜುಲು ಎಂಬಾತನನ್ನು ಜೀವನ್ಬಿಮಾನಗರ ಪೊಲೀಸರು ಬಂಧಿಸಿದ್ದಾರೆ.

‘ಎಚ್ಎಸ್ಆರ್ ಲೇಔಟ್ನಲ್ಲಿರುವ ಸ್ನೇಹಿತೆಯ ಮನೆಗೆ ಹೋಗಿದ್ದ ಸಂತ್ರಸ್ತ ಯುವತಿಯು ಅಲ್ಲಿಂದ ಮುರುಗೇಶಪಾಳ್ಯದಲ್ಲಿರುವ ಮನೆಗೆ ಮರಳಲುಬೆಳಗಿನ ಜಾವ 3.30ಕ್ಕೆ ಕ್ಯಾಬ್ ಕಾಯ್ದಿರಿಸಿದ್ದರು.ತಾನು ಸೂಚಿಸಿದ ವಸತಿ ಸಮುಚ್ಚಯದ ಬಳಿ ಕಾರು ನಿಲ್ಲಿಸದ ಚಾಲಕ, ಪಕ್ಕದ ರಸ್ತೆಗೆ ಹೋಗಿ ಕ್ಯಾಬ್ ನಿಲ್ಲಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಯುವತಿಯು ಚಾಲಕನ ಮೊಬೈಲ್ ಕಸಿದುಕೊಂಡು ಮನೆಗೆ ಮರಳಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘ಯುವತಿಯು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಚಾಲಕನಿಂದ ಕಸಿದುಕೊಂಡಿದ್ದ ಮೊಬೈಲ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಯ ಪತ್ತೆಗಾಗಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಆತನ ವಿಚಾರಣೆ ಮುಂದುವರಿಸಿದ್ದು, ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತದೆ’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.