ರಾಯಚೂರು: ಅಖಿಲ ಭಾರತ್ ಮುಷ್ಕರ ಇರುವುದರಿಂದ ನಗರದ ಕೇಂದ್ರ ಬಸ್ ನಿಲ್ದಾಣವು ಪ್ರಯಾಣಿಕರಿಲ್ಲದೆ ಖಾಲಿಖಾಲಿಯಾಗಿದೆ.
ಬಸ್ಗಳ ಸಂಚಾರ ಎಂದಿನಂತೆ ಮುಂದುವರಿದರೂ ವಿವಿಧ ಊರುಗಳಿಗೆ ತೆರಳಲು ಯೋಜನೆ ಮಾಡಿಕೊಂಡ ಜನರು, ಸಂಚಾರಕ್ಕೆ ವ್ಯತ್ಯಯ ಉಂಟಾಗಬಹುದು ಎಂದು ನಿಲ್ದಾಣದ ಕಡೆಗೆ ಬರುತ್ತಿಲ್ಲ.

ಬಸ್ಗಳೆಲ್ಲವೂ ಬೆರಳೆಣಿಕೆ ಪ್ರಯಾಣಿಕರೊಂದಿಗೆ ಸಂಚರಿಸುತ್ತಿವೆ. ಕೇಂದ್ರ ಬಸ್ ನಿಲ್ದಾಣದಲ್ಲಿ ಮಾತ್ರ ಬಂದ್ ವಾತಾವರಣ ಕಾಣುತ್ತಿದೆ. ಆದರೆ, ಪ್ರಯಾಣಿಕರು ಮಾತ್ರ ಕಾಣಿಸುತ್ತಿಲ್ಲ.

ಎಂದಿನಂತೆ ಸಂಚಾರ: ನಗರದೆಲ್ಲೆಡೆ ಅಂಗಡಿಗಳು, ಬೀದಿವ್ಯಾಪಾರ, ಆಟೋಗಳ ಸಂಚಾರ ಎಂದಿನಂತೆ ಆರಂಭವಾಗಿದೆ.ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಧಾವಂತದಲ್ಲಿ ಹೋಗುತ್ತಿರುವುದು ಕಂಡುಬಂತು.ಆದರೆ ನಗರದಲ್ಲಿ ಜನದಟ್ಟಣೆ ಕಡಿಮೆಯಾಗಿದೆ. ಬೇರೆ ಊರುಗಳಿಂದ ಬರುವವರ ಸಂಖ್ಯೆ ಕಡಿಮೆ ಇದೆ. ನಗರದ ಜನರು ಕೂಡಾ ಅಲ್ಲಲ್ಲಿ ಪ್ರತಿನಿತ್ಯ ಗುಂಪುಗಳಲ್ಲಿ ಕಾಣಿಸುತ್ತಿದ್ದ ದೃಶ್ಯ ಇಂದು ಕಾಣುತ್ತಿಲ್ಲ.

ಅಖಿಲ ಭಾರತ ಮುಷ್ಕರ ಪ್ರಯುಕ್ತ ವಿವಿಧ ಸಂಘಟನೆಗಳ ಕಾರ್ಯಕರ್ತರು ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.