ಮೈಸೂರು: ‘ಇದೇ ತಿಂಗಳ 25ರಿಂದ ಡಿ.25ರವರೆಗೆ ಬೀದರ್ನಿಂದ ಚಾಮರಾಜನಗರದವರೆಗೆ ವಕ್ಫ್ ಜನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಹಿಂದೂಗಳ ಬಗ್ಗೆ ಕಾಳಜಿ ಇರುವವರೆಲ್ಲಾ ಈ ಜಾಥಾಕ್ಕೆ ಬರಬಹುದು. ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಪಾಲ್ಗೊಳ್ಳಲಿ ಎಂದು ಮಾಧ್ಯಮದ ಮೂಲಕ ಕರೆಯುತ್ತೇವೆ. ಇದು ಬಿಜೆಪಿಯಿಂದ ನಡೆಯುತ್ತಿರುವ ಜಾಥಾ’ ಎಂದು ಹೇಳಿದರು.

‘ನನ್ನನ್ನು ಮುಟ್ಟಿದರೆ ಹುಷಾರ್’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು ಡಿ.ಕೆ. ಶಿವಕುಮಾರ್ಗೇ ಹೊರತು ಬೇರಾರಿಗೂ ಅಲ್ಲ. ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ ಶಾಸಕರ ಖರೀದಿಗೆ ಯಾರು ಬಂದಿದ್ದರು ಎಂಬುದಕ್ಕೆ ಮುಖ್ಯಮಂತ್ರಿ ದಾಖಲೆ ಕೊಡಲಿ. ಅದನ್ನು ಬಿಟ್ಟು ಸುಮ್ಮನೆ ಏನೇನೋ ಹೇಳಬಾರದು’ ಎಂದರು.

‘ಶಕ್ತಿ ಯೋಜನೆಯನ್ನು ಪುರುಷರಿಗೂ ವಿಸ್ತರಿಸುವ ಕುರಿತು ಚರ್ಚಿಸಿ, ನಿರ್ಧರಿಸಲಾಗುವುದು’ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ‘ಸ್ವಲ್ಪ ದಿನ ಕಾಯಿರಿ. ಈಗ ಇರುವ ಗ್ಯಾರಂಟಿಯೂ ನಿಲ್ಲುತ್ತದೆ. ಸರ್ಕಾರಿ ಬಸ್ಗಳಿಗೆ ಈಗ ಟೈರ್ ಇಲ್ಲ, ಎಂಜಿನ್ ಇಲ್ಲ. ಡಿ.ಕೆ. ಶಿವಕುಮಾರ್ ಅವರ ಮನೆಯಿಂದ ಡೀಸೆಲ್ ತಂದು ಹಾಕ್ತಾನಾ?’ ಎಂದು ಕೇಳಿದರು.

ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ‘ಯತ್ನಾಳ ನೇತೃತ್ವದಲ್ಲಿ ಜಾಥಾ ನಡೆಸುತ್ತಿದ್ದೇವೆ. ಯಾರೇ ಬಂದರೂ ಸ್ವಾಗತವಿದೆ’ ಎಂದರು.

ಯತ್ನಾಳ, ರಮೇಶ ಜಾರಕಿಹೊಳಿ ಜೊತೆ ಕುಮಾರ್ ಬಂಗಾರಪ್ಪ ಆಗಮಿಸಿ ಚಾಮುಂಡೇಶ್ವರಿ ದರ್ಶನ ಪಡೆದರು. ಈ ವೇಳೆ ಸ್ಥಳೀಯ ಬಿಜೆಪಿಯ ಮುಖಂಡರ್ಯಾರೂ ಪಾಳ್ಗೊಳ್ಳಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.