ಕೆ.ಆರ್.ನಗರ: ‘ಶಾಸಕ ಸಾ.ರಾ.ಮಹೇಶ್ ಅವರ ನಡವಳಿಕೆ, ದುರಹಂಕಾರದಿಂದಲೇ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಯಿತು’ ಎಂದು ಎಚ್.ವಿಶ್ವನಾಥ್ ಭಾನುವಾರ ಇಲ್ಲಿ ಆರೋಪಿಸಿದರು.

‘ದೇವೇಗೌಡರ ಕುಟುಂಬದವರ ಕಣ್ಣಲ್ಲಿ ನೀರು ತರಿಸಿದವರೇ ಸಾ.ರಾ.ಮಹೇಶ್. ದೇವೇಗೌಡರ ಬಗ್ಗೆ ನನಗೆ ಅಪಾರ ಕೃತಜ್ಞತೆ ಇದೆ. ಅದು ಸದಾ ಕಾಲ ಇರುತ್ತದೆ. ಆದರೆ, ಇವರಿಂದ ನನಗೆ ಯಾವುದೇ ಸಹಾಯವಾಗಿಲ್ಲ’ ಎಂದರು.

‘ಮಹೇಶ್ ಅವರ ದುರಹಂಕಾರದಿಂದ ಒಕ್ಕಲಿಗ ಸಮುದಾಯದ ನಾಲ್ವರು ಶಾಸಕರು ಜೆಡಿಎಸ್ ಬಿಟ್ಟು ಹೊರಬಂದರು. ಸಿದ್ದರಾಮಯ್ಯ ಅವರಿಂದ ರೋಸಿ ಹೋಗಿದ್ದ ಕುರುಬ ಸಮುದಾಯದ ನಾಲ್ವರು ಶಾಸಕರು ಹೊರಬಂದರು. ಅದನ್ನು ಅರ್ಥ ಮಾಡಿಕೊಳ್ಳಬೇಕು. ನಾವ್ಯಾರೂ ಮೂಲೆ ಗುಂಪಾಗಿದ್ದವರಲ್ಲ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.