ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಸಂತೋಷ್ ಹಾಗೂ ಪ್ರಲ್ಹಾದ ಜೋಶಿ ಕಾರಣ. ಅವರೇ ಅವಲೋಕನ ಸಭೆಗೆ ಹಾಜರಾಗದಿದ್ದರೆ ಹೇಗೆ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಬಿಜೆಪಿಯ ಆತ್ಮವಲೋಕನ ಸಭೆಯಲ್ಲಿ ನಡೆದ ಮಾತಿನ ಚಕಮಕಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಬಿಜೆಪಿಯಲ್ಲಿ ಈಗ ಸೋಲಿನ ಆತ್ಮಾವಲೋಕನದ ಹೆಸರಲ್ಲಿ ಸಂತೋಷ ಕೂಟ ಹಾಗೂ BSY ಕೂಟದ ನಡುವೆ ಒಬ್ಬರನ್ನೊಬ್ಬರು ಸೋಲಿಸುವ ಅವಲೋಕನ ನಡೆಯುತ್ತಿದೆ‘ ಎಂದು ಕಾಂಗ್ರೆಸ್ ತಮಾಷೆ ಮಾಡಿದೆ.

‘ಈ ಸೋಲಿನ ಅವಲೋಕನ ಸಭೆಗಳಿಗೆ ಜೋಶಿ, ಸಂತೋಷ್ ಅವರುಗಳು ಬಾಗವಹಿಸದೆ, ತಮ್ಮ ಶಿಷ್ಯಪಡೆಯನ್ನು ಮುಂದೆ ಬಿಟ್ಟಿರುವುದೇಕೆ?‘ ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಅಲ್ಲದೇ. ಹೀನಾಯ ಸೋಲಿಗೆ ಅವರಿಬ್ಬರೇ ಕಾರಣರಲ್ಲವೇ, ಅವರೇ ಇಲ್ಲದಿದ್ದರೆ ಹೇಗೆ? ಎಂದು ಪಶ್ನಿಸಿದೆ.

‘ಬಿಜೆಪಿಯ ಒಂದು ಬಣ ಹೊಂದಾಣಿಕೆ ರಾಜಕೀಯದಿಂದ ನಮಗೆ ಸೋಲಾಯಿತು ಎನ್ನುತ್ತಿದೆ. ಮತ್ತೊಂದು ಬಣ ಕಾಂಗ್ರೆಸ್ ಗ್ಯಾರಂಟಿಗಳಿಂದ ನಮಗೆ ಸೋಲಾಯ್ತು ಎನ್ನುತ್ತಿದೆ. ಎರಡೂ ಬಣದವರು ಸತ್ಯ ಹೇಳಲು, ಒಪ್ಪಿಕೊಳ್ಳಲು ತಯಾರಿಲ್ಲ. ಶೇ 40 ಕಮಿಷನ್ ಭ್ರಷ್ಟಾಚಾರದಿಂದ, ದುರಾಡಳಿತದಿಂದ, ಜನಪರ ಚಿಂತನೆಗಳು ಇಲ್ಲದಿರುವುದರಿಂದ, ಹಗರಣಗಳಿಂದ ಸೋಲಾಗಿದ್ದನ್ನು ಒಪ್ಪಿಕೊಳ್ಳದಿದ್ದರೆ ಬಿಜೆಪಿಯದ್ದು ಆತ್ಮಾವಲೋಕನ ಆಗುವುದಿಲ್ಲ. ಆತ್ಮ ವಂಚಕತನ ಆಗುತ್ತದೆ‘ ಎಂದು ಕಾಂಗ್ರೆಸ್ ಛೇಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.