ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಮಿಷನ್ 150’ ಗುರಿಯನ್ನು ಸಾಧಿಸಲು ರಾಜ್ಯ ವ್ಯಾಪಿ ಬಿಜೆಪಿ ಹಮ್ಮಿಕೊಂಡಿರುವ ‘ಬೂತ್ ವಿಜಯ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಈ ಅಭಿಯಾನವು ಇದೇ 12 ರವರೆಗೆ ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಬಿಜೆಪಿ ಧ್ವಜಗಳನ್ನು ಹಾರಿಸುವುದಕ್ಕೂ ಚಾಲನೆ ನೀಡಲಾಯಿತು. ಬೊಮ್ಮಾಯಿ ಅವರು ಶಿವಾಜಿನಗರ ವ್ಯಾಪ್ತಿಯ ವಸಂತನಗರದ ಕೆಲವು ಮನೆಗಳಲ್ಲಿ ಪಕ್ಷದ ಧ್ವಜವನ್ನು ಕಟ್ಟಿದರು.

ಪ್ರತಿಯೊಂದು ಬೂತ್‌ನಲ್ಲಿ ವಿರೋಧಿ ಪಕ್ಷಗಳಿಗಿಂತ ಅಧಿಕ ಮತಗಳನ್ನು ಗಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಅಣಿಗೊಳಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳ 312 ಮಂಡಲಗಳು, 1,445 ಮಹಾಶಕ್ತಿ ಕೇಂದ್ರಗಳು,11,642 ಶಕ್ತಿ ಕೇಂದ್ರಗಳು ಮತ್ತು 58,186 ಬೂತ್‌ಗಳ ಕಾರ್ಯಕರ್ತರು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಗದಗ, ಶೋಭಾ ಕರಂದ್ಲಾಜೆ ಉಡುಪಿ, ಭಗವಂತ ಖೂಬಾ ಬೀದರ್, ಎ.ಎನ್.ನಾರಾಯಣ ಸ್ವಾಮಿ ಚಿತ್ರದುರ್ಗ, ಶಾಸಕ ಜಗದೀಶ ಶೆಟ್ಟರ್ ಹಾವೇರಿ, ಸಂಸದ ಡಿ.ವಿ.ಸದಾನಂದಗೌಡ ಬೆಂಗಳೂರು ಉತ್ತರ, ಶಾಸಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ, ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಚಿಕ್ಕೋಡಿ, ಸಚಿವರಾದ ಆರ್.ಅಶೋಕ ಬೆಂಗಳೂರು ದಕ್ಷಿಣ, ಕೆ.ಗೋಪಾಲಯ್ಯ ಹಾಸನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.

ಸುಮಾರು 20 ಲಕ್ಷ ಕಾರ್ಯಕರ್ತರು ಚುನಾವಣೆಯವರೆಗೆ ಪಕ್ಷದ ಗೆಲುವಿಗಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬೂತ್ ಸಮಿತಿ ಪರಿಶೀಲನೆ, ಪೇಜ್ ಪ್ರಮುಖ್ ನಿಯುಕ್ತಿ, ಬೂತ್ ವಾಟ್ಸ್ ಆ್ಯಪ್ ಗ್ರೂಪ್‌ಗಳ ರಚನೆ, ಮನ್‌ಕೀ ಬಾತ್ ವೀಕ್ಷಣೆಗೆ ಸುಮಾರು 60 ಸಾವಿರ ಗುಂಪುಗಳ ರಚನೆ ಮಾಡಲಾಗುವುದು ಎಂದು ಬಿಜೆಪಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.