ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡ್ಡ ಕುಸಿತ: ಬಸ್‌ ಸಂಚಾರ ವ್ಯತ್ಯಯ; ಮಂಗಳೂರು–ಬೆಂಗಳೂರು ನಡುವೆ ಹೆಚ್ಚುವರಿ ರೈಲು

Published 19 ಜುಲೈ 2024, 9:35 IST
Last Updated 19 ಜುಲೈ 2024, 10:51 IST
ಅಕ್ಷರ ಗಾತ್ರ

ಮಂಗಳೂರು: ಗುಡ್ಡ ಕುಸಿತದಿಂದಾಗಿ ಕರಾವಳಿಯನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ಎರಡು ಮುಖ್ಯ ರಾಷ್ಟೀಯ ಹೆದ್ದಾರಿಗಳಲ್ಲಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ಎರಡು ಹೆಚ್ಚುವರಿ ವಿಶೇಷ ರೈಲು ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ಕ್ರಮ ಕೈಗೊಂಡಿದೆ.

06547 ಸಂಖ್ಯೆಯ ರೈಲು ಯಶವಂತಪುರದಿಂದ ಇಂದು (ಶುಕ್ರವಾರ) ಹೊರಡಲಿದ್ದು, 06548 ಸಂಖ್ಯೆಯ ರೈಲು ಮಂಗಳೂರು ಜಂಕ್ಷನ್‌ನಿಂದ ಶನಿವಾರ ಹೊರಡಲಿದೆ. 06549 ಸಂಖ್ಯೆಯ ರೈಲು ಇದೇ 21 ಮತ್ತು 22ರಂದು ಯಶವಂತಪುರರಿಂದ ಮಂಗಳೂರು ಜಂಕ್ಷನ್‌ಗೆ ಹೊರಡಲಿದ್ದು, 06550 ಸಂಖ್ಯೆಯ ರೈಲು 21 ಮತ್ತು 22ರಂದು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಹೊರಡಲಿದೆ.

ತಲಾ ಎರಡು ಸ್ಲೀಪರ್ ಕೋಚ್‌ಗಳು ಸೇರಿದಂತೆ ಈ ಎಲ್ಲ ರೈಲುಗಳಲ್ಲಿ ಒಟ್ಟು 18 ಕೋಚ್‌ಗಳು ಇರುತ್ತವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಮಂಗಳೂರು-ಬೆಂಗಳೂರು ನಡುವೆ ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮತ್ತು ಮೈಸೂರು ವಿಭಾಗದ ವ್ಯವಸ್ಥಾಪಕರಿಗೆ ಶುಕ್ರವಾರ ಬೆಳಿಗ್ಗೆ ಪತ್ರ ಬರೆದಿದ್ದರು.

ಮಂಗಳೂರು- ಬೆಂಗಳೂರು ನಗರಗಳ ನಡುವೆ ಪ್ರತಿನಿತ್ಯ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಇತರ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಹೆಚ್ಚುವರಿ ರೈಲು ಸೇವೆಯನ್ನು ಒದಗಿಸುವ ಅಗತ್ಯವಿದೆ. ಶೀಘ್ರದಲ್ಲಿ ಹೆಚ್ಚುವರಿ ರೈಲು ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಚೌಟ ವಿನಂತಿಸಿದ್ದಾರೆ.

ವೇಳಾಪಟ್ಟಿ:

  • ಬೆಂಗಳೂರು (ಎಸ್‌ಬಿಸಿ)–ಮಂಗಳೂರು ಸೆಂಟ್ರಲ್‌: 06547 ಸಂಖ್ಯೆಯ ರೈಲು ಬೆಂಗಳೂರಿನಿಂದ ಇಂದು (ಶುಕ್ರವಾರ) ರಾತ್ರಿ 11 ಗಂಟೆಗೆ ಹೊರಡಲಿದ್ದು, ಶನಿವಾರ ಜುಲೈ 20ರಂದು ಬೆಳಿಗ್ಗೆ 11.40ಕ್ಕೆ ಮಂಗಳೂರು ಜಂಕ್ಷನ್‌ ತಲುಪಿದೆ.

  • ‌ಮಂಗಳೂರು ಜಂಕ್ಷನ್‌–ಯಶವಂತಪುರ: ಜುಲೈ 20ರಂದು ಶನಿವಾರ ಮಧ್ಯಾಹ್ನ 1.40ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ 06548 ಸಂಖ್ಯೆಯ ರೈಲು ಅದೇ ದಿನ ರಾತ್ರಿ 11.15ಕ್ಕೆ ಯಶವಂತಪುರ ಜಂಕ್ಷನ್‌ ತಲುಪಲಿದೆ.

  • ಯಶವಂತಪುರ –ಮಂಗಳೂರು ಜಂಕ್ಷನ್‌: ಜುಲೈ 21ಮತ್ತು 22ರಂದು . 06549 ಸಂಖ್ಯೆಯ ರೈಲು ಜುಲೈ 21 ಮತ್ತು 22ರಂದು ಯಶವಂತಪುರರಿಂದ ಮಧ್ಯರಾತ್ರಿ 12.23ಕ್ಕೆ (00.30)ಕ್ಕೆ ಹೊರಟು, ಬೆಳಿಗ್ಗೆ 11.24ಕ್ಕೆ ಮಂಗಳೂರು ಜಂಕ್ಷನ್‌ ತಲುಪುವುದು.

  • ಮಂಗಳೂರು ಜಂಕ್ಷನ್‌–ಯಶವಂತಪುರ: 06550 ಸಂಖ್ಯೆಯ ರೈಲು 22 ಮತ್ತು 22ರಂದು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 1.40ಕ್ಕೆ ಹೊರಟು, ರಾತ್ರಿ ರಾತ್ರಿ 11.15ಕ್ಕೆ ಯಶವಂತಪುರ ತಲುಪುವುದು.

  • ತಲಾ ಎರಡು ಸ್ಲೀಪರ್ ಕೋಚ್‌ಗಳು ಸೇರಿದಂತೆ ಈ ಎಲ್ಲ ರೈಲುಗಳಲ್ಲಿ ಒಟ್ಟು 18 ಕೋಚ್‌ಗಳು ಇರುತ್ತವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT