ವಿಧಾನಸಭೆ: ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ 2024ರ ಜನವರಿಯಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗಕ್ಕೆ ₹12 ಕೋಟಿ ಅಂದಾಜು ವೆಚ್ಚವಾಗಲಿದೆ.

ಬಜೆಟ್‌ನ ಅಂದಾಜು ವೆಚ್ಚಕ್ಕೆ ಹೊರತಾಗಿ, ಸರ್ಕಾರ ಹೆಚ್ಚುವರಿಯಾಗಿ ವಿವಿಧ ಕಾರ್ಯಕ್ರಮ ಹಾಗೂ ವೆಚ್ಚಗಳಿಗಾಗಿ ಭರಿಸಬೇಕಾದ ಒಟ್ಟು ₹ 3,542.10 ಕೋಟಿ ಮೊತ್ತದ ಮೊದಲ ಪೂರಕ ಅಂದಾಜನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಕೈಗಾರಿಕಾ ಸಚಿವರ ನೇತೃತ್ವದ ನಿಯೋಗದ ಅಮೆರಿಕ ಭೇಟಿಗೆ ₹ 2.25 ಕೋಟಿ, ವಿಧಾನ ಸಭಾಧ್ಯಕ್ಷರಿಗೆ ಹೊಸ ವಾಹನ ಖರೀದಿಸಲು ₹ 39 ಲಕ್ಷ, ಉಪ ಸಭಾಪತಿಗೆ ಹೊಸ ವಾಹನ ಖರೀದಿಸಲು ಹೆಚ್ಚುವರಿಯಾಗಿ ₹ 8 ಲಕ್ಷ ಒದಗಿಸಲಾಗಿದೆ.

ವಿವರಗಳು:

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗೆ ₹ 14.23 ಕೋಟಿ

ಹಿಮಾಚಲ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ನಷ್ಟಕ್ಕೆ ಅಲ್ಲಿನ ಸಿಎಂ ನಿಧಿಗೆ ₹ 15 ಕೋಟಿ

ಶಾಸಕರಿಗೆ ವಾಹನ ಖರೀದಿಸಲು ₹ 4 ಕೋಟಿ

ಸಚಿವರ ಕಚೇರಿ ವೆಚ್ಚಕ್ಕೆ ₹ 2.71 ಕೋಟಿ

ಮತದಾರರಿಗೆ ಗುರುತಿನ ಚೀಟಿ ನೀಡಲು ಮುಖ್ಯ ಚುನಾವಣಾ ಕಚೇರಿಗೆ ₹ 30 ಕೋಟಿ

ನವದೆಹಲಿಗೆ ತೆರಳಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು 33 ಸಚಿವರು ಬಳಕೆ ಮಾಡಲು 38 ಹೊಸ ವಾಹನಗಳ ಖರೀದಿಗೆ ₹ 7.44 ಕೋಟಿ

ನವದೆಹಲಿಯ ಕರ್ನಾಟಕ ಭವನದಲ್ಲಿ ಬಳಕೆಗೆ ಐದು ಹೊಸ ವಾಹನಗಳ ಖರೀದಿಗೆ ₹ 1.15 ಕೋಟಿ

ಮುಖ್ಯ ಚುನಾವಣಾಧಿಕಾರಿ ಕಚೇರಿಗೆ 3 ವಾಹನಗಳ ಖರೀದಿಗೆ ₹ 50.50 ಲಕ್ಷ

ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆ (ಶಿಶುಪಾಲನಾ ಕೇಂದ್ರ) ಸ್ಥಾಪಿಸಲು ₹ 10 ಕೋಟಿ

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ₹ 2 ಕೋಟಿ

ರಾಜ್ಯ ಹಜ್ ಸಮಿತಿಯ ಆಡಳಿತಾತ್ಮಕ ವೆಚ್ಚಕ್ಕೆ ₹ 5 ಕೋಟಿ

ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೆ ₹ 4.85 ಕೋಟಿ

ವಿಷ್ಣುವರ್ಧನ ಸ್ಮಾರಕ ನಿರ್ಮಾಣದ ಕಾಮಗಾರಿಗೆ ₹ 75.47 ಲಕ್ಷ

2022–23 ಮತ್ತು 2023–24ನೇ ಸಾಲಿನ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ನೀಡಲು ₹ 7.30 ಕೋಟಿ

ಇನ್ವೆಸ್ಟ್ ಕರ್ನಾಟಕ ಫೋರಂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಹೊಸ ವಾಹನ ಖರೀದಿಸಲು ₹ 20 ಲಕ್ಷ

ಮೈಸೂರು ದಸರಾಕ್ಕೆ ₹ 8.50 ಕೋಟಿ

86ನೇ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ ₹ 4.66 ಕೋಟಿ

ಕರ್ನಾಟಕ ಸಂಭ್ರಮ– 50 ಆಚರಣೆಗೆ ₹ 5 ಕೋಟಿ

ನ್ಯಾಯಾಂಗ ಅಧಿಕಾರಿಗಳ ವೈದ್ಯಕೀಯ ವೆಚ್ಚದ ಬಿಲ್ ಮರುಪಾವತಿಗೆ ₹ 4 ಕೋಟಿ

ನ್ಯಾಯಾಂಗ ಅಧಿಕಾರಿಗಳ ನಿವಾಸದ ಕಟ್ಟಡ ವೆಚ್ಚಕ್ಕೆ ₹ 4 ಕೋಟಿ

ಅಡ್ವೊಕೇಟ್ ಜನರಲ್ ಅವರ ಕಚೇರಿ ಆಧುನೀಕರಣಕ್ಕೆ ₹ 4.50 ಕೋಟಿ

ರಾಜ್ಯಮಟ್ಟದ ವಕೀಲರ ಸಮ್ಮೇಳನಕ್ಕೆ ₹ 50 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.