ಬೆಳಗಾವಿ: ಜೀ ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16’ರಲ್ಲಿ ವಿಜೇತನಾಗಿ ಭರವ ಸೆಯ ಗಾಯಕನಾಗಿ ಹೊರ ಹೊಮ್ಮಿರುವ ಗೋಕಾಕದ ಬಾಲಕ ಓಂಕಾರ ಪತ್ತಾರ ತಮಗೆ ಸನ್ಮಾನದಿಂದ ಬಂದ ₹10 ಸಾವಿರವನ್ನು ಸಂತ್ರಸ್ತರ ನೆರವಿಗೆಂದು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿ ಎಳವೆಯಲ್ಲೇ ಸಾಮಾಜಿಕ ಹೊಣೆಗಾರಿಕೆ ಮೆರೆದಿದ್ದಾರೆ.

ಶಂಕರಲಿಂಗ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಓಂಕಾರಗೆ ಬಹುಮಾನವಾಗಿ ನಿವೇಶನ ದೊರೆತಿದೆ. ಸಂಘ– ಸಂಸ್ಥೆಗಳವರು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಿದ್ದರು. ಈ ಹಣವನ್ನು ಅವರು ಸಮಾಜಕ್ಕೇ ಹಿಂತಿರುಗಿಸಿದ್ದಾರೆ.

ವಾಸವಿದ್ದ ಬಾಡಿಗೆ ಮನೆ ಘಟಪ್ರಭಾ ನದಿ ಪ್ರವಾಹ ದಿಂದಾಗಿ ಕುಸಿದಿತ್ತು. ಈ ನೋವಲ್ಲೂ ಹಾಡಿ ಗೆದ್ದಿದ್ದರು. ‘ನಮ್ಮಂತೆ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಸಹಾಯ ವಾಗಲೆಂದು ಹಣ ಕೊಟ್ಟಿದ್ದೇನೆ. ನಿರಾಶ್ರಿತರ ಸಂಕಟ ಕಂಡು ದುಃಖವಾಯಿತು. ಅದೇ ಪ್ರೇರಣೆಯಾಯಿತು. ಈಗ ಕೊಟ್ಟಿದ್ದು ಕಡಿಮೆಯೇ. ಎಂಜಿನಿಯರ್ ಆಗಿ ಸಮಾಜಕ್ಕೆ ಹೆಚ್ಚಿನ ಸಹಾಯ ಮಾಡುವ ಮನಸ್ಸಿದೆ’ ಎನ್ನುತ್ತಾರೆ ಅವರು.

‘ಪ್ರಾಥಮಿಕ ಶಾಲೆಯಲ್ಲಿದ್ದಾಗಿನಿಂದಲೂ ಸಹಾಯ ಮನೋಭಾವವಿದೆ. ಸಹಪಾಠಿಗಳಿಗೆ ಪೆನ್ನು, ಪೆನ್ಸಿಲ್ ಕೊಡುತ್ತಾನೆ. ಊಟ ತರದಿದ್ದವರೊಂದಿಗೆ ಹಂಚಿಕೊಳ್ಳುತ್ತಾನೆ. ಭಿಕ್ಷುಕರನ್ನು ಕಂಡರೆ ಮರುಗುತ್ತಾನೆ’ ಎಂದು ತಂದೆ ಕೃಷ್ಣ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.