ಬೆಂಗಳೂರು:ಮಕ್ಕಳ ಸಹಾಯವಾಣಿಗೆ (1098) ಕರೆ ಮಾಡಿ ಬಾಲ್ಯವಿವಾಹದ ಬಂಧನದಿಂದ ತಪ್ಪಿಸಿಕೊಂಡಕೆ.ಆರ್.ಪೇಟೆ ಬಾಲಕಿಸಿ.ಆರ್.ಕಾವ್ಯಶ್ರೀಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ಲಾಘಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ನಡೆದಿದ್ದ ವಿಚಾರಕ್ಕೆ ಸಂಬಂಧಿಸಿ ‘ಪ್ರಜಾವಾಣಿ’ ಪತ್ರಿಕೆ ಗುರುವಾರ ವರದಿ ಪ್ರಕಟಿಸಿದೆ.

ಪ್ರಜಾವಾಣಿ ವೆಬ್ ಪ್ರಕಟಿಸಿದ್ದ ವರದಿ:ಬಾಲ್ಯವಿವಾಹದಿಂದ ಬಿಡಿಸಿಕೊಂಡ ಬಾಲಕಿ

ವರದಿಯ ಪ್ರತಿಯನ್ನು ಮುಖ್ಯಮಂತ್ರಿಗಳ ಅಧಿಕೃತ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ. ಜತೆಗೆ, ‘ಬಾಲ್ಯವನ್ನು ಚಿವುಟುವ ಪ್ರಯತ್ನವನ್ನು ದಿಟ್ಟವಾಗಿ ಎದುರಿಸಿದ ಕಾವ್ಯಶ್ರೀ ಇತರರಿಗೆ ಮಾದರಿ. ಮಕ್ಕಳಿಗೆ ಯಾವುದೇ ತೊಂದರೆ ಎದುರಾದರೂ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ. ಮಕ್ಕಳ ದಿನಾಚರಣೆಯಂದು ಸಮಸ್ತ ಜನರಲ್ಲಿ ಸವಿನಯ ಪ್ರಾರ್ಥನೆ, ಮಕ್ಕಳನ್ನು ಬದುಕಲು ಬಿಡಿ, ಬೆಳೆಯಲು ಬಿಡಿ, ಬೆಳಗಲು ಬಿಡಿ’ ಎಂದು ಬರೆಯಲಾಗಿದೆ.

ಕೆ.ಆರ್.ಪೇಟೆ ತಾಲ್ಲೂಕು ಚಟ್ಟೇನಹಳ್ಳಿ ಗ್ರಾಮದ ರಾಮೇಗೌಡ–ಸಾವಿತ್ರಮ್ಮ ದಂಪತಿಗೆ ನಾಲ್ವರು ಪುತ್ರಿಯರು. ಆ ಪೈಕಿ 15 ವರ್ಷದ ಕಾವ್ಯಶ್ರೀಗೆ ಮದುವೆ ನಿಗದಿ ಮಾಡಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ 80ರಷ್ಟು ಅಂಕ ಗಳಿಸಿದ್ದ ಆಕೆ ಕಾಲೇಜಿಗೆ ತೆರಳುವ ಕನಸು ಕಾಣುತ್ತಿದ್ದಳು.ಮದುವೆ ಬೇಡವೆಂದರೂ ಮನೆಯವರು ಕೇಳಿರಲಿಲ್ಲ. ಹೀಗಾಗಿ ಒಲ್ಲದ ಮದುವೆ ತಡೆಯಲು ಆಕೆ ಸಹಾಯವಾಣಿಗೆ ಕರೆ ಮಾಡಿದ್ದಳು. ಪರಿಣಾಮವಾಗಿಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮನೆಗೆ ತೆರಳಿ ವಿವಾಹ ರದ್ದಾಗುವಂತೆ ಮಾಡಿದ್ದರು. ಶಿಕ್ಷಕರೂ ಮನೆಗೆ ತೆರಳಿ ಪೋಷಕರಿಗೆ ಬುದ್ಧಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.