ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾವುಕತೆಯಿಂದ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರವನ್ನು ಬಾರದ ಲೋಕಕ್ಕೆ ಬೀಳ್ಕೊಟ್ಟರು.

ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿದ್ದಪುನೀತ್ ಮೃತದೇಹವಿದ್ದ ಗಾಜಿನ ಪೆಟ್ಟಿಗೆ ಬಳಿ ಬರುವ ಮುನ್ನ ತಾವು ಹಾಕಿಕೊಂಡಿದ್ದ ಚಪ್ಪಲಿಗಳನ್ನು ದೂರದಲ್ಲೇ ಕಳಚಿದ ಅವರು ನಂತರ ತದೇಕಚಿತ್ತದಿಂದ ಅಪ್ಪುವಿನ ಮೊಗವನ್ನು ನೋಡಿ ಕೈಮುಗಿದರು.

ಅಲ್ಲೆ ನಿಂತಿದ್ದ ಶಾಸಕ ರಾಜುಗೌಡಗೆ ಶವಪೆಟ್ಟಿಗೆ ತೆರೆಯುವಂತೆ ಸೂಚಿಸಿದ ಅವರು ಪುನೀತ್ ಹಣೆಗೆ ಎರಡು ಬಾರಿ ಮುತ್ತಿಟ್ಟರು. ಬಲಗೈಯಿಂದ ತಲೆಯನ್ನು ನೇವರಿಸಿದರು. ಎರಡೂ ಕೈಗಳಿಂದ ಎದೆಯನ್ನು ಸ್ಪರ್ಶಿಸಿದರು. ಬಳಿಕ ಮತ್ತೆ ತಲೆ ನೇವರಿಸಿದರು. ಎರಡೂ ಕೈಗಳಿಂದ ಕೆನ್ನೆಯನ್ನು ಸವರುವ ವೇಳೆ ಗದ್ಗದಿತರಾದರು. ಅವರಿಗೆ ಅರಿವಿಲ್ಲದ ಹಾಗೆಯೇ ಕಣ್ಣುಗಳು ಹನಿಗೂಡಿದ್ದವು. ಬಳಿಕ ಕೈಜೋಡಿಸಿ ಮತ್ತೊಮ್ಮೆ ಪಾರ್ಥಿವ ಶರೀರಕ್ಕೆ ನಮಿಸಿದರು.

ಅಲ್ಲಿಂದ ನೇರವಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಬಳಿ ಹೋಗಿ ಅವರಿಗೆ ಧೈರ್ಯ ಹೇಳಿದರು. ಆ ದೃಶ್ಯ ನೋಡುಗರ ಕಣ್ಣುಗಳನ್ನು ತೇವಗೊಳಿಸುವಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.