ದೇವನಹಳ್ಳಿ:ಸಾಹಿತಿ ಎಸ್.ಎಲ್ ಭೈರಪ್ಪ ಅವರು ತಿಗಳ ಸಮುದಾಯದ ಆರಾಧ್ಯ ದೇವತೆ ದ್ರೌಪದಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ತಿಗಳ ವಹ್ನಿಕುಲ ಸಂಘ ಶನಿವಾರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದೆ. ಭೈರಪ್ಪನವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.

ಮೈಸೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭೈರಪ್ಪನವರು ತಿಗಳ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಸಾರ್ವಜನಿಕವಾಗಿ ತಿಗಳ ಸಮುದಾಯದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಮುದಾಯದ ನಾಯಕರು ಎಚ್ಚರಿಕೆ ನೀಡಿದ್ದಾರೆ.

‘ಪ್ರತಿ ಸಮುದಾಯಕ್ಕೂ ಅದರದೇ ಆದ ಪುರಾಣ ಮತ್ತು ಐತಿಹಾಸಿಕ ನಂಟು ಇರುತ್ತದೆ. ಆ ನಂಬಿಕೆಗಳ ಮೇಲೆ ಆಯಾ ಸಮುದಾಯದ ಧಾರ್ಮಿಕ ಭಾವನೆ, ಸಂಪ್ರದಾಯ, ಆಚರಣೆಗಳಿರುತ್ತವೆ. ಒಂದು ಸಮುದಾಯದ ಸಂಪ್ರದಾಯದ ಬಗ್ಗೆ ಕೀಳಾಗಿ ಮಾತನಾಡುವುದು ಭೈರಪ್ಪನವರಂಥ ಹಿರಿಯಸಾಹಿತಿಗೆ ಶೋಭೆ ತರುವುದಿಲ್ಲ’ ಎಂದುತಿಗಳವಹ್ನಿಕುಲ ಸಂಘದ ತಾಲ್ಲೂಕು ಅಧ್ಯಕ್ಷ ಗೋಪಾಲಕೃಷ್ಣ ಹೇಳಿದ್ದಾರೆ.

ತಿಗಳ ಸಂಘ ರಾಜ್ಯ ಸಂಘದ ನಿರ್ದೇಶಕ ಎಸ್.ಸಿ.ಚಂದ್ರಪ್ಪ, ಸದಸ್ಯ ಲಕ್ಷ್ಮಣ್, ಸಂಚಾಲಕ ಮುನಿವೀರಣ್ಣ,ತಾಲ್ಲೂಕು ಗೌರವಾಧ್ಯಕ್ಷ ಕೇಶವಪ್ಪ, ಉಪಾಧ್ಯಕ್ಷ ಶಿವರಾಮಪ್ಪ ಮುಂತಾದವರು ಠಾಣೆಗೆ ತೆರಳಿ ದೂರು ನೀಡಿದ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.