ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ನಿಯಮಗಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇದರಿಂದಾಗಿ ಕಾರ್ಮಿಕರ ಧನ ಸಹಾಯ, ಸಾಮಾಜಿಕ ಭದ್ರತೆ ಯೋಜನೆಗಳ ಮೊತ್ತ ಹೆಚ್ಚಳವಾಗಲಿದೆ. ಅಲ್ಲದೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಈ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿತ್ತು.

ತಿದ್ದುಪಡಿಯ ಪ್ರಮುಖ ಅಂಶಗಳು
*ಪಿಂಚಣಿ ಸೌಲಭ್ಯ ₹2,000 ದಿಂದ ₹3,000 ಕ್ಕೆ ಹೆಚ್ಚಳ
* ಗೃಹ ಭಾಗ್ಯ ಸೌಲಭ್ಯದಡಿ 21ರಿಂದ 50 ವರ್ಷದ ನೋಂದಾಯಿತ ಫಲಾನುಭವಿಗಳಿಗೆ ಮನೆ ಕಟ್ಟಲು 10 ಕಂತುಗಳಲ್ಲಿ ಸಾಲ ನೀಡಲು ನಿಯಮಗಳ ಸರಳೀಕರಣ
* ಹೆರಿಗೆ ಸೌಲಭ್ಯದಡಿ ಸಹಾಯಧನ ₹50 ಸಾವಿರಕ್ಕೆ ಹೆಚ್ಚಳ
*ಅಂತಿಮ ಸಂಸ್ಕಾರ ವೆಚ್ಚ ಸೌಲಭ್ಯದಡಿ ಸಹಾಯ ಧನ ₹50,000 ದಿಂದ ₹71,000ಕ್ಕೆ ಹೆಚ್ಚಳ. ಕೋವಿಡ್‌ನಿಂದ ಫಲಾನುಭವಿ ಮೃತಪಟ್ಟರೆ ಅವಲಂಬಿತರಿಗೆ ₹2 ಲಕ್ಷ ಸಹಾಯಧನ
* ಫಲಾನುಭವಿಗಳ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ತರಬೇತಿ, ಕಲಿಕಾ ಕಿಟ್, ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಟ್ಯಾಬ್ ವಿತರಣೆ
* ವೈದ್ಯಕೀಯ ಸೌಲಭ್ಯದಡಿ ಸಹಾಯಧನ ₹10,000 ದಿಂದ ₹20,000 ಕ್ಕೆ ಹೆಚ್ಚಳ, ಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸಂಚಾರಿ ವೈದ್ಯಕೀಯ ಘಟಕಗಳ ಸ್ಥಾಪನೆ, ಅವಶ್ಯಕತೆ ಇದ್ದಾಗ ಪೌಷ್ಟಿಕ ಆಹಾರ ಕಿಟ್‌ಗಳ ವಿತರಣೆ.
* ಫಲಾನುಭವಿ ಕೆಲಸ ಮಾಡುವ ಸ್ಥಳದಲ್ಲಿ ಅಪಘಾತದಿಂದ ಮೃತ ಪಟ್ಟರೆ ಅವಲಂಬಿತರಿಗೆ ಪರಿಹಾರ ₹2 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ
* ಮದುವೆ ಸಹಾಯಧನದ ಮೊತ್ತ ₹50,000 ದಿಂದ ₹60,000 ಕ್ಕೆ ಏರಿಕೆ
* ಸಾರಿಗೆ ಸೌಲಭ್ಯದಡಿ ಫಲಾನುಭವಿಗಳಿಗೆ ರಾಜ್ಯದಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಪಾಸ್ ಸೌಲಭ್ಯ ಒದಗಿಸುವುದು.
* ಮಂಡಳಿಯ ಕಾರ್ಯದರ್ಶಿಗಳಿಗೆ ಆರ್ಥಿಕ ಇಲಾಖೆ ನಿಗದಿ ಮಾಡಿರುವ ವಿತ್ತಾಧಿಕಾರ ₹2 ಕೋಟಿಯಿಂದ ₹2.5 ಕೋಟಿಗೆ ಹೆಚ್ಚಿಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.