ಚಿತ್ರದುರ್ಗ: ಹತ್ತಿ ಖರೀದಿಯನ್ನು ಏಕಾಏಕಿ ಸ್ಥಗಿತಗೊಳಿಸಿದ್ದರಿಂದ ಅಸಮಾಧಾನಗೊಂಡ ರೈತರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಇದರಿಂದ ಕೆಲ ಹೊತ್ತು ಎಪಿಎಂಸಿ ಆವರಣದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಸಂಜೆಯ ಬಳಿಕ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದರು. ಖರೀದಿದಾರರು ಕೇಳಿದ ಬೆಲೆಗೆ ಹತ್ತಿ ಮಾರಾಟ ಮಾಡಿ ರೈತರು ಗ್ರಾಮಗಳಿಗೆ ತೆರಳಿದರು.

ಚಿತ್ರದುರ್ಗ ಎಪಿಎಂಸಿಯಲ್ಲಿಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಹತ್ತಿ ಖರೀದಿಸಲಾಗುತ್ತದೆ.
ತುಮಕೂರು, ದಾವಣಗೆರೆ ಸೇರಿ ಹೊರಜಿಲ್ಲೆಗಳ ರೈತರು ಹತ್ತಿ ಮಾರಾಟಕ್ಕೆ ಬಂದಿದ್ದರು.

ಟೆಂಡರ್ ಪ್ರಕ್ರಿಯೆ ದಿಢೀರ್ ರದ್ದು ಮಾಡಿದ್ದು ರೈತರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತು.

ಎಪಿಎಂಸಿ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಧರಣಿ ಕುಳಿತ ರೈತರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಅಧಿಕಾರಿಗಳು ಸ್ಪಂದಿಸದ ಪರಿಣಾಮ ಕಚೇರಿಗೆ ಮುತ್ತಿಗೆ ಹಾಕಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು.

‘ನಸಿಕಿನಲ್ಲಿಯೇ ಹತ್ತಿ ತಂದು ಟೆಂಡರ್ಗೆ ಕಾಯುತ್ತಿದ್ದೇವೆ. ಶಿರಾ ಭಾಗದ ರೈತರು ಸೋಮವಾರ ರಾತ್ರಿಯೇ ಬಂದು ವಾಸ್ತವ್ಯ ಹೂಡಿದ್ದಾರೆ. ಟೆಂಡರ್ ಪ್ರಕ್ರಿಯೆ ರದ್ದು ಮಾಡಿದ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ. ಗುರುವಾರದವರೆಗೆ ಎಪಿಎಂಸಿಯಲ್ಲಿ ಕಾಯಲು ಸಾಧ್ಯವಿಲ್ಲ’ ಎಂದುಭರಮಸಾಗರದ ಶೇಖರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.