ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನ ಕಳ್ಳ ಸಾಗಣೆ | ನಿಬ್ಬೆರಗಾದ ಅಧಿಕಾರಿಗಳು; ₹67 ಲಕ್ಷ ಮೌಲ್ಯದ ಚಿನ್ನ ವಶ

Published : 21 ಅಕ್ಟೋಬರ್ 2023, 5:01 IST
Last Updated : 21 ಅಕ್ಟೋಬರ್ 2023, 5:01 IST
ಫಾಲೋ ಮಾಡಿ
Comments

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ಮುಂಜಾನೆ ಮಲೇಷ್ಯಾ, ಕುವೈತ್‌ ಮತ್ತು ಕ್ವಾಲಲಂಪುರ ನಿಂದ ಬಂದ ಮೂರು ಪ್ರಯಾಣಿಕರು ಚಿನ್ನವನ್ನು ಸಾಗಣೆ ಮಾಡಲು ಯತ್ನಿಸಿದ್ದು, ಅವರು ಬುದ್ಧಿವಂತಿಕೆಗೆ ಕಸ್ಟಮ್ಸ್‌ ಅಧಿಕಾರಿಗಳು ನಿಬ್ಬೆರಗಾಗಿದ್ದಾರೆ.

ಆರೋಪಿತರಿಂದ ಒಟ್ಟು ₹67.57 ಲಕ್ಷ ಮೌಲ್ಯದ ಚಿನ್ನವನ್ನು ಒಂದೇ ದಿನದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಒಂದೇ ವಿಮಾನದಲ್ಲಿ ಇಬ್ಬರು ಮಹಿಳೆಯರಿಂದ ಚಿನ್ನ ವಶ 

ಕ್ವಾಲಲಂಪುರನಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದ ಭಾರತೀಯ ಮೂಲದ ಮಹಿಳೆಯೊಬ್ಬರು ತೊಟ್ಟಿದ್ದ ರವಿಕೆಯಲ್ಲಿ 300.95 ಗ್ರಾಂ ಚಿನ್ನದ ಪೇಸ್ಟ್ ಬ್ಲೌಸ್‌ನಲ್ಲಿ ಇರಿಸಿದ್ದರು. ಇದನ್ನು ನೋಡಿ ತಪಾಸಣಾ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ.

ಆಕೆಯಿಂದ ವಶಕ್ಕೆ ಪಡೆದ ಚಿನ್ನವ ಮೌಲ್ಯ ₹17.9 ಲಕ್ಷ ಎಂದು ತಿಳಿದು ಬಂದಿದೆ.

ಇದೇ ವಿಮಾನದಲ್ಲಿ ಬಂದಿದ್ದ ಮಲೇಷ್ಯಾ ಮೂಲದ ಮಹಿಳೆ ಗುದದ್ವಾರದಲ್ಲಿ ನಾಲ್ಕು ಕ್ಯಾಪ್ಸೂಲ್‌ಗಳಲ್ಲಿ ಒಟ್ಟು 578.27 ಗ್ರಾಂ ಚಿನ್ನವನ್ನು ಅಡಗಿಸಿಟ್ಟುಕೊಂಡು ಬಂದಿದ್ದಳು.
ವೈದ್ಯರ ಸಹಾಯದಿಂದ ಗುದದ್ವಾರದಲ್ಲಿದ ಚಿನ್ನವನ್ನು ಹೊರತೆಗೆದಿದ್ದು, ಅದರ ಮೌಲ್ಯ ₹ 34.4 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೈ ಪ್ರೂಟ್ಸ್‌ನಲ್ಲಿ ಚಿನ್ನ ಕಳ್ಳ ಸಾಗಣೆ

ಕುವೈತ್‌ನಿಂದ ಬಂದ ಭಾರತೀಯ ಮೂಲದ ಪ್ರಯಾಣಿಕನು ಚಿನ್ನವನ್ನು ಸಣ್ಣ ಸಣ್ಣದಾಗಿ ತುಂಡು ಮಾಡಿ, ಗೋಡಂಬಿ, ಬಾದಾಮಿ, ಪಿಸ್ತಾವನ್ನು ಒಳಗೊಂಡಿದ್ದ ಡ್ರೈ ಫ್ರೂಟ್ಸ್ ಪೊಟ್ಟಣದಲ್ಲಿ ಸೇರಿಸಿ, ಅಧಿಕಾರಿಗಳನ್ನು ಯಾಮಾರಿಸಲು ಯತ್ನಿಸಿದ್ದ.

ತಪಾಸಣೆಯ ವೇಳೆಯಲ್ಲಿ ಡ್ರೈ ಫ್ರೂಟ್ಸ್‌ ಪೊಟ್ಟಣದಲ್ಲಿ ಚಿನ್ನದ ಸಣ್ಣ ಸಣ್ಣ 254 ಗ್ರಾಂ ತೂಕದ ತುಂಡುಗಳು ಇರುವುದು ಕಂಡು ಬಂದಿದೆ. ಇದರ ಮೌಲ್ಯವೂ ₹15.26 ಲಕ್ಷವಾಗಿದ್ದು, ಇದೇ ಆರೋಪಿಯಿಂದ ₹1.49 ಲಕ್ಷ ಮೌಲ್ಯದ ಐ ಪೋನ್‌ 14 ಪ್ರೋ ಮ್ಯಾಕ್‌ ಮೊಬೈಲ್‌ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT