ಶಿವಮೊಗ್ಗ: ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯ ಸಿದ್ದೇಶ್ವರ ಅವರು ಹಿಮಾಚಲ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ವಿಶ್ವದ ಅತಿ ಉದ್ದದ ಅಟಲ್‌ಸುರಂಗ ಮಾರ್ಗದತ್ತ ಪ್ರಯಾಣ ಬೆಳೆಸಿದರು.

ಶಿವಮೊಗ್ಗದಿಂದ ಅಟಲ್ ಸುರಂಗ 2700 ಕಿ.ಮೀ.ದೂರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅ.3ರಂದು ಸುರಂಗ ಮಾರ್ಗ ಉದ್ಘಾಟಿಸಿದ್ದರು. ಈ ಸುರಂಗ ಮಾರ್ಗ ಪ್ರವಾಸಿ ಸ್ಥಳವಾಗಿ ಬದಲಾಗಿದೆ. ಇಂತಹ ಸ್ಥಳಕ್ಕೆ ಸಿದ್ದೇಶ್ವರ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. 30 ದಿನಗಳಲ್ಲಿ ಯಾತ್ರೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.

ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದ ಮುಂಭಾಗ ಸಾಹಸ ಸೈಕಲ್ ಯಾತ್ರೆಗೆ ಚಾಲನೆ ನೀಡಲಾಯಿತು. ಸೈಕಲ್ ಕ್ಲಬ್ ಸದಸ್ಯರು ಸ್ವಲ್ಪ ದೂರ ಸೈಕಲ್ ತುಳಿದು ಜತೆಯಾದರು. ಕ್ಲಬ್ ಅಧ್ಯಕ್ಷ ಬಿ.ಎಸ್.ಶ್ರೀಕಾಂತ್, ಕಾರ್ಯದರ್ಶಿ ಗಿರೀಶ್ ಕಾಮತ್, ಹರೀಶ್ ಕಾರ್ಣಿಕ್, ನರಸಿಂಹ ಮೂರ್ತಿ, ಗುರುಮೂರ್ತಿ, ರಜನಿ ಕಾಂತ್, ಗಣೇಶ್ ಕಾಮತ್, ನಟರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.