ಬೆಂಗಳೂರು: ‘ದೇಶದ ರಕ್ಷಣಾ ಉದ್ಯಮವನ್ನು ವಿಶ್ವದರ್ಜೆಯ ಉದ್ಯಮವನ್ನಾಗಿ ರೂಪಿಸುವ ಮೂಲಕ, ಭಾರತವು 2024ಕ್ಕೆ ₹25 ಸಾವಿರ ಕೋಟಿಯಷ್ಟು ರಫ್ತು ವಹಿವಾಟು ನಡೆಸುವ ಗುರಿ ಹೊಂದಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

‘ಏರೋ ಇಂಡಿಯಾ–2023’ರ ಅಂಗವಾಗಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ರಕ್ಷಣಾ ಕ್ಷೇತ್ರದಲ್ಲಿ ಭಾರತವು ಆತ್ಮನಿರ್ಭರ ಸಾಧಿಸುವ ಗುರಿ ಹೊಂದಿದೆ. ಸದ್ಯ ಈ ವಲಯದಲ್ಲಿ ₹13 ಸಾವಿರ ಕೋಟಿ ವಹಿವಾಟಿನಷ್ಟು ರಫ್ತು ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

‘ವೈಮಾನಿಕ ಕ್ಷೇತ್ರದ ಅಭಿವೃದ್ಧಿಗೆ ಏರೋ ಇಂಡಿಯಾ ಪ್ರದರ್ಶನವು ಉತ್ತೇಜನ ನೀಡಲಿದೆ. ಈ ಹಿಂದಿನ ಆವೃತ್ತಿಗಳಿಗಿಂತಲೂ ಈ ಬಾರಿಯದ್ದು ಅತಿ ದೊಡ್ಡದು‘ ಎಂದು ತಿಳಿಸಿದರು.

‘ಕ್ರಿಯಾಶೀಲವಾದ ರಕ್ಷಣಾ ಪರಿಕರಗಳ ತಯಾರಿಕೆ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಉದ್ದೇಶ. ಏರೋ ಇಂಡಿಯಾದಲ್ಲಿ ಮಿತ್ರ ರಾಷ್ಟ್ರಗಳ ಪಾಲ್ಗೊಳ್ಳುವಿಕೆ ಕೇವಲ ರಕ್ಷಣಾ ಉಪಕರಣಗಳ ಖರೀದಿ ಮತ್ತು ಮಾರಾಟದ ವಹಿವಾಟಿಗಷ್ಟೇ ಸೀಮಿತವಾಗಿಲ್ಲ. ದ್ವಿಪಕ್ಷೀಯ ಬಾಂಧವ್ಯಗಳ ವೃದ್ಧಿ ಉದ್ದೇಶವನ್ನು ಭಾರತವು ಹೊಂದಿದೆ. ಹೀಗಾಗಿ, ಪ್ರತಿ ಬಾರಿಯೂ ದಾಖಲೆಯ ವಹಿವಾಟು ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಭಾರತದ ಪೆವಿಲಿಯನ್ ನವಭಾರತದ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಲಿದೆ. ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನಕ್ಕೆ ಇದು ಸಾಕ್ಷಿಯಾಗಲಿದೆ. ನವೋದ್ಯಮಗಳು, ಸೈಬರ್ ಭದ್ರತೆ, ಇ–ಮ್ಯಾನೇಜ್‌ಮೆಂಟ್ ಮುಂತಾದ ವಿಷಯಗಳನ್ನು ಇಲ್ಲಿ ಬಿಂಬಿಸಲಾಗುವುದು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.