ಬೆಂಗಳೂರು: ಕ್ಷಯರೋಗಿಗಳಲ್ಲಿ ಬ್ಯಾಕ್ಟೀರಿಯಾಗಳಿಂದ ಶ್ವಾಸಕೋಶಕ್ಕೆ ಯಾವ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ ಎಂಬುದನ್ನು ಕರಾರುವಾಕ್ಕಾಗಿ ಪತ್ತೆ ಮಾಡಲು ಸಾಧ್ಯವಾಗುವ 3 ಡಿ ಹೈಡ್ರೊಜೆಲ್ ಕಲ್ಚರ್ ವ್ಯವಸ್ಥೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಬಯೋ ಎಂಜಿನಿಯರಿಂಗ್ ವಿಭಾಗ ಅಭಿವೃದ್ಧಿಪಡಿಸಿದೆ.

ಕ್ಷಯ ವಿಶ್ವದಾದ್ಯಂತ ತೀವ್ರ ಸ್ವರೂಪದಲ್ಲಿ ಬಾಧಿಸುತ್ತಿರುವ ಸೋಂಕು. ಇದರ ಬ್ಯಾಕ್ಟೀರಿಯಾಗಳು ಔಷಧ ನಿರೋಧಕ ಶಕ್ತಿಯನ್ನೂ ಬೆಳೆಸಿಕೊಂಡು ತೀರಾ ಅಪಾಯಕಾರಿಯಾಗಿ ಪರಿಣಮಿಸಿವೆ. 3 ಡಿ ಹೈಡ್ರೊಜೆಲ್ ಕಲ್ಚರ್ (ಕಸಿ) ವ್ಯವಸ್ಥೆಯು ಕ್ಷಯರೋಗಕ್ಕೆ ಫಲಪ್ರದ ಮತ್ತು ಪರಿಣಾಮಕಾರಿ ಚಿಕಿತ್ಸೆಗೆ ಹೊಸ ಮತ್ತು ಸರಳ ವಿಧಾನವಾಗಲಿದೆ.

ಈ ಹೈಡ್ರೊಜೆಲ್ ವ್ಯವಸ್ಥೆಯು ಸಸ್ತನಿಗಳಲ್ಲಿನ ಶ್ವಾಸಕೋಶದ ಪರಿಸರವನ್ನು ಅನುಕರಿಸುತ್ತದೆ. ಅಲ್ಲದೇ, ಶ್ವಾಸಕೋಶದ ಕೋಶಗಳಿಗೆ ಹೇಗೆ ಬ್ಯಾಕ್ಟೀರಿಯಾವನ್ನು ಅಂಟಿಸುತ್ತದೆ ಎಂಬುದನ್ನು ಪತ್ತೆ ಮಾಡಲು ಮತ್ತು ಮುಂದುವರೆದ ಅಧ್ಯಯನ ನಡೆಸಲು ಶಕ್ತಿಶಾಲಿ ವೇದಿಕೆಯನ್ನು ಕಲ್ಪಿಸಿಕೊಡಲಿದೆ. ಜತೆಗೆ ಕ್ಷಯಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಮತ್ತು ಅದಕ್ಕೆ ಬಳಸುವ ಚಿಕಿತ್ಸಕಗಳ ಪರಿಣಾಮಕಾರಿ ವಿಧಾನಗಳನ್ನೂ ಇದರ ಮೂಲಕ ಪರೀಕ್ಷಿಸಬಹುದಾಗಿದೆ.

‘ಮೈಕೊ ಬ್ಯಾಕ್ಟಿರಿಯಂ ಟ್ಯುಬರ್ ಕ್ಯೂಲೋಸಿಸ್ (ಎಂಟಿಬಿ) ಅತ್ಯಂತ ಹಳೆಯ ಬ್ಯಾಕ್ಟೀರಿಯಾ, ಮಾನವನ ದೇಹದಲ್ಲೇ ಒಂದಷ್ಟು ಪ್ರಮಾಣದಲ್ಲಿ ವಿಕಾಸಗೊಂಡಿದೆ’ ಎಂದು ಬಯೋ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರೊಫೆಸರ್ ರಚಿತ್ ಅಗರ್ವಾಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಎಂಟಿಬಿ ಸೋಂಕಿನ ಅಧ್ಯಯನಕ್ಕೆ ಈಗ ಚಾಲ್ತಿಯಲ್ಲಿರುವ ಕಸಿ ಮಾದರಿ (2ಡಿ) ಹಲವು ಮಿತಿಗಳನ್ನು ಹೊಂದಿದೆ. ಶ್ವಾಸಕೋಶದ ಪರಿಸರದಲ್ಲಿ ಬ್ಯಾಕ್ಟೀರಿಯಾಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಮೂರು ಆಯಾಮಗಳಲ್ಲಿ ನಿಖರವಾಗಿ ಅನುಕರಿಸಿ (ಮಿಮಿಕ್) ತೋರಿಸುವುದಿಲ್ಲ. ಏಕೆಂದರೆ ಕಸಿ ಮಾಡುವ ಹಾಳೆಗಳು ಏಕಪದರದ್ದಾಗಿರುತ್ತವೆ. 2 ಡಿ ಕಸಿ ಹಾಳೆಗಳಲ್ಲಿ ಕಂಡು ಬರುವ ಫಲಿತಾಂಶಕ್ಕೂ ಶ್ವಾಸಕೋಶವನ್ನು ಆವರಿಸಿರುವ ಅಂಗಾಂಶದ ಬಾಹ್ಯಕೋಶಿಯ ಮ್ಯಾಟ್ರಿಕ್ಸ್ಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ ಎನ್ನುತ್ತಾರೆ ಪಿಎಚ್ಡಿ ವಿದ್ಯಾರ್ಥಿ ವಿಶಾಲ್ ಗುಪ್ತಾ.

2 ಡಿ ಕಸಿ ಹಾಳೆಗಳಿಗೂ ನೈಜ ಶ್ವಾಸಕೋಶದ ಅಂಗಾಂಶಗಳಿಗೂ ಅಜಗಜಾಂತರ ವ್ಯತ್ಯಾಸ, ಒಂದು ಗಟ್ಟಿ ಕಲ್ಲಿಗೂ ಮತ್ತೊಂದು ದಿಂಬಿಗೂ ಹೋಲಿಸಬಹುದು ಎನ್ನುತ್ತಾರೆ ಅಗರ್ವಾಲ್.

ರಚಿತ್ ಅಗರ್ವಾಲ್ ಮತ್ತು ವಿಶಾಲ್ ಗುಪ್ತಾ ಸೇರಿ ಈ ವಿನೂತನ 3ಡಿ ಹೈಡ್ರೊಜೆಲ್ ಕಲ್ಚರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ವಿಶೇಷವೆಂದರೆ ಶ್ವಾಸಕೋಶದ ಕೋಶಗಳ ಇಸಿಎಂನಲ್ಲಿರುವ ಮಹತ್ವದ ಅಣು ಹ್ರೈಡ್ರೊಜೆಲ್ನಲ್ಲೂ ಇರುತ್ತದೆ. 3 ಡಿ ಹೈಡ್ರೊಜೆಲ್ ಅನ್ನು ಕಾಲಜನ್ ಎಂಬ ಒಂದು ಬಗೆಯ ಪ್ರೋಟೀನ್ನಿಂದ ತಯಾರಿಸಲಾಗುತ್ತದೆ.

ಮೈಕೊ ಬ್ಯಾಕ್ಟಿರಿಯಂ ಟ್ಯುಬರ್ಕ್ಯೂಲೋಸಿಸ್ (ಬ್ಯಾಕ್ಟೀರಿಯಾ) ಹ್ರೈಡ್ರೊಜೆಲ್ಗೆ ಸೋಂಕಿದ ಬಳಿಕ ಅದರ ಬೆಳವಣಿಗೆ ಹೇಗೆ ಸಾಗುತ್ತದೆ ಎಂಬುದನ್ನು ಅಧ್ಯಯನ ತಂಡ ಎರಡರಿಂದ ಮೂರು ವಾರಗಳ ಕಾಲ ಗಮನಿಸಿದೆ. ಈ ವ್ಯವಸ್ಥೆಯಲ್ಲಿ ಸಸ್ತನಿಗಳ ಕೋಶ ಮೂರು ವಾರಗಳ ಕಾಲ ಬದುಕುಳಿದರೆ, ಈಗಿನ 2 ಡಿ ವ್ಯವಸ್ಥೆಯಲ್ಲಿ ನಾಲ್ಕ ರಿಂದ ಏಳು ದಿನಗಳು ಮಾತ್ರ ಬದುಕುಳಿಯಬಲ್ಲವು. ಅಂದರೆ ದೇಹದಲ್ಲಿ ಈ ರೋಗಕಾರಕ ತೀರಾ ಮಂದಗತಿಯಲ್ಲಿ ಬೆಳೆಯುತ್ತವೆ ಎಂಬುದು ಗಮನಕ್ಕೆ ಬಂದಿದೆ ಎನ್ನುತ್ತಾರೆ ಅಗರ್ವಾಲ್.

ಈ 3 ಡಿ ಹೈಡ್ರೊಜೆಲ್ ಕಲ್ಚರ್ ವ್ಯವಸ್ಥೆಯ ಮೇಲೆ ಪೇಟೆಂಟ್ ಪಡೆಯಲು ಅರ್ಜಿಯನ್ನು ಸಲ್ಲಿಸಿದೆ. ಇದನ್ನು ರೋಗಿಗಳಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಮತ್ತು ಔಷಧ ಪರೀಕ್ಷೆಗೆ ಬಳಸಬಹುದಾಗಿದೆ. ಉದ್ಯಮಗಳು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು.

1.6 ಕೋಟಿ ಜನರಿಗೆ ಸೋಂಕು

‘ಮೈಕೊ ಬ್ಯಾಕ್ಟಿರಿಯಂ ಟ್ಯುಬರ್ಕ್ಯೂಲೋಸಿಸ್ (ಎಂಟಿಬಿ) ಅತ್ಯಂತ ಅಪಾಯಕಾರಿ ಬ್ಯಾಕ್ಟೀರಿಯಾ. 2022 ರಲ್ಲಿ ಜಗತ್ತಿನಲ್ಲಿ 1.6 ಕೋಟಿ ಮಂದಿಗೆ ಈ ಸೋಂಕು ತಗುಲಿತ್ತು. ಇದರಿಂದ 10.3 ಲಕ್ಷ ಮಂದಿ ಮೃತಪಟ್ಟಿದ್ದರು’ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.