ಬೆಂಗಳೂರು: ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್ ಕಡೆ ವಾಲಿರುವ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸೋಲು ಕಂಡ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ಬುಧವಾರ ಭೇಟಿ ಮಾಡಿದರು.

ಸದಾಶಿವನಗರದಲ್ಲಿರುವ ಸುರೇಶ್ ನಿವಾಸಕ್ಕೆ ಬಂದ ಸೋಮಶೇಖರ್ ಮತ್ತು ಹೆಬ್ಬಾರ್ ಕೆಲಹೊತ್ತು ಮಾತುಕತೆ ನಡೆಸಿದರು. ಸಚಿವ ಜಮೀರ್ ಅಹಮದ್ ಖಾನ್, ಚಿತ್ರದುರ್ಗ ಪರಾಜಿತ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ, ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ, ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ ಕೂಡಾ ಸುರೇಶ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಜನರಿಗೆ ತಪ್ಪಿನ ಅರಿವಾಗಲಿದೆ: ಎಸ್.ಟಿ. ಸೋಮಶೇಖರ್ ಮಾತನಾಡಿ, ‘28 ಲೋಕಸಭಾ ಸದಸ್ಯರ ಪೈಕಿ, ಹೆಚ್ಚು ಕೆಲಸ ಮಾಡಿದವರು, ಕೇಂದ್ರದ ಅನೇಕ ಯೋಜನೆಗಳನ್ನು ತಂದವರು, ಸರ್ಕಾರದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿದವರು ಡಿ.ಕೆ. ಸುರೇಶ್. ಆದರೆ, ಜನ ಈ ರೀತಿ ತೀರ್ಪು ಕೊಟ್ಟಿದ್ದಾರೆ. ಮುಂದೆ ಜನರಿಗೆ ತಪ್ಪಿನ ಅರಿವಾಗಲಿದೆ’ ಎಂದರು.

‘ಈ ಬಾರಿ ಎಲ್ಲರೂ ಡಿ.ಕೆ. ಸುರೇಶ್ ಅವರನ್ನು ಗುರಿ ಮಾಡಿದ್ದರು. 24X7 ರಾಜಕಾರಣ ಮಾಡಿದವರು ಅವರು. ಅವರಂತೆ ಯಾರೂ ಕೆಲಸ ಮಾಡಿಲ್ಲ. ಜನ ಯಾಕೆ ಈ ನಿಲುವು ತೆಗೆದುಕೊಂಡರೊ ಗೊತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.