ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳು, ನಿರ್ದೇಶನಾಲಯಗಳಲ್ಲಿ ‘ಲರ್ನಿಂಗ್ ಆ್ಯಪ್’ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್ಎಸ್ಎಸ್ ಕೋಶ ಮತ್ತು ಡಾ.ರಾಜ್ಕುಮಾರ್ ಅಕಾಡೆಮಿ ಮಧ್ಯೆ ಗುರುವಾರ ಒಪ್ಪಂದ ಮಾಡಿಕೊಳ್ಳಲಾಯಿತು.

ಒಪ್ಪಂದದ ನಂತರ ಮಾತನಾಡಿದ ಸಚಿವ ಬಿ.ನಾಗೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಅಳವಡಿಸಿಕೊಂಡಿರುವ ರಾಜ್ಯದ 65 ವಿಶ್ವವಿದ್ಯಾಲಯಗಳು ಹಾಗೂ ನಾಲ್ಕು ನಿರ್ದೇಶನಾಲಯಗಳ ಸುಮಾರು 6.40 ಲಕ್ಷ ಸ್ವಯಂ ಸೇವಕರು ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಸಹಾಯವಾಗಲಿದೆ ಎಂದರು.

ಡಾ.ರಾಜ್ಕುಮಾರ್ ಅಕಾಡೆಮಿ ಮುಖ್ಯಸ್ಥ ರಾಘವೇಂದ್ರ ರಾಜ್ಕುಮಾರ್ ಮತ್ತು ಗುರು ರಾಜ್ಕುಮಾರ್ ಮಾತನಾಡಿ, ‘ನಮ್ಮ ಕುಟುಂಬ ಅಕಾಡೆಮಿ ಮೂಲಕ ಬಡ ಮಕ್ಕಳು, ಪ್ರತಿಭಾವಂತರ ವಿದ್ಯಾವಿಕಾಸಕ್ಕೆ ಸಹಕಾರ ನೀಡುತ್ತಿದೆ. ಆನ್ಲೈನ್ ಮೂಲಕ ಸ್ಪರ್ಧಾ ಪರೀಕ್ಷೆಗಳಿಗೆ ತರಬೇತಿ ನೀಡಲು ಲರ್ನಿಂಗ್ ಆ್ಯಪ್ ಸಿದ್ಧಪಡಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.