ಬೆಂಗಳೂರು: ದಿನದಿಂದ ದಿನಕ್ಕೆ ಸುದ್ದಿಯ ಮುಂಚೂಣಿಯಲ್ಲಿರುವ ನಟ ದುನಿಯಾ ವಿಜಯ್, ಮೊದಲ ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲು ತುಳಿದಿದ್ದಾರೆ.

‘ಪತ್ನಿ ನಾಗರತ್ನ ಅವರ ವರ್ತನೆಯಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗಿದೆ. ಈಕೆಯಿಂದ ಬಿಡುಗಡೆ ಕೊಡಿಸಿ‘ ಎಂದು ಕೋರಿ ವಿಜಯ್ ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ.

ವಿಚ್ಛೇದನಕ್ಕೆ ನೀಡಿರುವ ಪ್ರಮುಖ ಕಾರಣಗಳು:

* ಕುಟುಂಬದಲ್ಲಿ ಮನಃಶಾಂತಿ ಹಾಳಾಗಿದೆ. ನಾಗರತ್ನಳ ಕ್ರೌರ್ಯ ಹೆಚ್ಚಾಗಿದೆ.

* ಈ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಗ ಒತ್ತಡಕ್ಕೆ ಮಣಿದು ಅರ್ಜಿ ಹಿಂಪಡೆದಿದ್ದೆ.

* ಅರ್ಜಿ ಹಿಂಪಡೆದ ಮೇಲೂ ನಾಗರತ್ನ ವರ್ತನೆಯಲ್ಲಿ ಬದಲಾವಣೆ ಆಗಲಿಲ್ಲ.

* ನಾಗರತ್ನ ಅವರಿಗೆ ಯಾವಾಗಲೂ ನನ್ನನ್ನು ಅನುಮಾನದಿಂದ ನೋಡುವ ಬುದ್ಧಿ ಇದೆ.

* ನಾನು ಐದು ಮದುವೆಯಾಗಿದ್ದೇನೆ ಎಂದು ಮಾದ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿದ್ದಾರೆ.

* ಹಲವು ಮಹಿಳೆಯರ ಜೊತೆ ಸಂಬಂಧ ಕಲ್ಪಿಸಿ ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ.

* ನನ್ನ ಕುಟುಂಬದ ಬಗ್ಗೆ ಹೊಲಸು ಪದಗಳಲ್ಲಿ ಮಾತನಾಡುವುದು ಅತಿಯಾಗಿದೆ.

* ಕೆಲ ದಿನಗಳ ಹಿಂದೆ ಕೀರ್ತಿಗೌಡ ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.

ಅರ್ಜಿದಾರ ವಿಜಿ ಪರ ವಕೀಲರಾದ ರಾಜರಾಜೇಶ್ವರಿ ವಕಾಲತ್ತು ವಹಿಸಿದ್ದಾರೆ.

ನಾನು ರೌಡಿಯೋ ಆಕೆ ರೌಡಿಯೋ..?

‘ನನ್ನ ಪತ್ನಿ ನಾಗರತ್ನಳ ಮಾನಸಿಕ ಕಿರುಕುಳವನ್ನು 18 ವರ್ಷಗಳಿಂದ ಸಹಿಸಿಕೊಂಡಿದ್ದೆ. ಆದರೆ, ಈಗ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಈಗ ವಿಚ್ಛೇದನದ ಮಾರ್ಗ ತುಳಿದಿದ್ದೇನೆ’ ಎಂದು ವಿಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈಕೆ ನನ್ನ ತಾಯಿಗೂ ಈಗ್ಗೆ ಮೂರು ವರ್ಷಗಳ ಕೆಳಗೆ ಹೊಡೆದಿದ್ದಳು. ಆದರೆ, ಅದಕ್ಕೆ ನನ್ನ ಬಳಿ ಯಾವುದೇ ಸಬೂಬು ಇರಲಿಲ್ಲ. ಈಗ ಸಿಕ್ಕಿದೆ’ ಎಂದರು.

‘ಈಗ ಎರಡು ದಿನಗಳಿಂದ ತಲೆ ಮರೆಸಿಕೊಂಡಿದ್ದಾಳೆ. ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದಾಳೆ. ಅಪರಾಧಿ ಭಾವನೆ ಯಾರಿಗೆ ಇದೆ ಎಂಬುದನ್ನು ಈಗ ನೀವೇ ಹೇಳಿ’ ಎಂದು ಕೇಳಿದರು.

‘ಈ ಮೊದಲಿಗೆ ನಾನು ಏನು ಹೇಳಿದರೂ ಜನ ಒಪ್ಪುತ್ತಿರಲಿಲ್ಲ. ಸಿನಿಮಾದಲ್ಲಿದ್ದಾನೆ, ಈಕೆಯ ಆರೋಪಗಳು ನಿಜ ಇರಹುದೇನೊ ಬಿಡು ಎಂದು ಅನುಮಾನಿಸುತ್ತಿದ್ದರು. ಆದರೆ, ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನನ್ನ ಜೀವನದಲ್ಲಿ ಇಂತಹ ಗಳಿಗೆಯನ್ನು ಯಾವತ್ತೂ ಎದರುಸಿರಲಿಲ್ಲ. ನೆಮ್ಮದಿಯೇ ಹಾಳಾಗಿದೆ’ ಎಂದು ಅಲವತ್ತುಕೊಂಡರು.

*ಸಂಸಾರ ಮಾಡೋರು ಮನೆತುಂಬಾ ಸಿಸಿಟಿವಿ ಹಾಕ್ಕೊಂಡಿರಲಿಕ್ಕೆ ಆಗುತ್ಯೇ?
- ದುನಿಯಾ ವಿಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.