ಬೆಂಗಳೂರು:ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ನಿರ್ಮಾಣ ವಾಗುತ್ತಿರುವ 8,100 ಹೊಸ ಕೊಠಡಿಗಳಿಗೆ ‘ವಿವೇಕ’ ಎಂಬ ಹೆಸರಿಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.

ರಾಜ್ಯ ಸರ್ಕಾರ ₹ 992 ಕೋಟಿ ವೆಚ್ಚದಲ್ಲಿ 8,100 ಕೊಠಡಿಗಳನ್ನು ನಿರ್ಮಿಸುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರ ಎಲ್ಲ ಕೊಠಡಿಗಳಿಗೂ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ವಿವೇಕ ಎಂದು ಹೆಸರಿಡಲು ಹಾಗೂ ವಿವೇಕಾನಂದರ ಪರಿಕಲ್ಪನೆಗೆ ಪೂರಕವಾದ ಏಕ ರೂಪದ ಬಣ್ಣ, ಅವರ ಭಾವಚಿತ್ರ, ತತ್ವ, ಸಂದೇಶಗಳನ್ನು ಬರೆಸಲು ಆಲೋಚನೆ ನಡೆದಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

‘ವಿವೇಕ ಎಂದರೆ ಜ್ಞಾನವೂ ಹೌದು, ಗೋಡೆಗಳಿಗೆ ಬಳಿಯುವ ಬಣ್ಣದಆಯ್ಕೆ ಕುರಿತು ಇನ್ನೂ ಚರ್ಚಿಸಿಲ್ಲ’ ಎಂದು ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.