ಬೆಂಗಳೂರು: ‘ಮೋತಿ’ ಹೆಸರಿನ 35 ವರ್ಷ ವಯಸ್ಸಿನ ಖಾಸಗಿ ಒಡೆತನಕ್ಕೆ ಸೇರಿದ ಆನೆಯೊಂದು ಉತ್ತರಾಖಂಡದಲ್ಲಿ ತಿಂಗಳ ಹಿಂದೆ ತಪ್ಪಲಿನಲ್ಲಿ ಕುಸಿದುಬಿದ್ದಿತ್ತು. ಬಲಪಾದದ ಮೂಳೆಮುರಿತಕ್ಕೆ ಒಳಗಾಗಿದ್ದ ಆನೆಗೆ, ಸಕಾಲದಲ್ಲಿ ಚಿಕಿತ್ಸೆ ಸಿಗದೇ ಐದಾರು ತಿಂಗಳು ಪರದಾಡಿತ್ತು. ಶನಿವಾರ ಕೊನೆಯುಸಿರೆಳೆಯಿತು.

ವೈಲ್ಡ್ಲೈಫ್ ಎಸ್ಒಎಸ್ ಹಾಗೂ ಭಾರತೀಯ ಸೇನೆ ಎಚ್ಚರಿಸುವವರೆಗೆ ಅದಕ್ಕೆ ಚಿಕಿತ್ಸೆ ದೊರೆತಿರಲಿಲ್ಲ. ಮಾವುತನ ಉದಾಸೀನದಿಂದಾಗಿ ಪಾದದ ಮೂಳೆ ಮುರಿತಕ್ಕೆ ಚಿಕಿತ್ಸೆ ಸಿಗದೆ, ಸ್ನಾಯುಗಳಲ್ಲಿನ ಕೋಶಗಳೆಲ್ಲ ಸಡಿಲಗೊಂಡು ಇನ್ನಷ್ಟು ಆರೋಗ್ಯದ ಸಮಸ್ಯೆಗಳು ಆನೆಯನ್ನು ಬಾಧಿಸಿದ್ದವು.

‘ನಾಲ್ಕು ವಾರ ಮೋತಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟೆವು. ಆನೆಯೂ ಚಿಕಿತ್ಸೆಗೆ ಸ್ಪಂದಿಸಿ, ಹೋರಾಟದ ಮನೋಭಾವ ತೋರಿತ್ತು. ಆದರೂ ಉಳಿಸಿಕೊಳ್ಳಲು ಆಗಲಿಲ್ಲ’ ಎಂದು ವೈಲ್ಡ್ಲೈಫ್ ಎಸ್ಒಎಸ್ ಸಂಸ್ಥೆಯ ಸಹ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ತಿಕ್ ಸತ್ಯನಾರಾಯಣ್ ಬೇಸರದಿಂದ ಪ್ರತಿಕ್ರಿಯಿಸಿದರು.

ಭಾರತದ ರಾಷ್ಟ್ರೀಯ ಸಂಪತ್ತು ಎನಿಸಿರುವ ಆನೆಗಳನ್ನು ಉದಾಸೀನದಿಂದ ನೋಡಬಾರದು. ಅವುಗಳ ಆರೋಗ್ಯ ಸಮಸ್ಯೆ ನಿರ್ಲಕ್ಷಿಸಿದರೆ ಮೋತಿಗೆ ಆದಂಥ ಗತಿ ಒದಗುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ಗೀತಾ ಶೇಷಮಣಿ ವಿಷಾದಿಸಿದರು.

ಸಂಸ್ಥೆಯ ಪಶುವೈದ್ಯಾಧಿಕಾರಿ ಡಾ. ರಾಹುಲ್ ರಜಪೂತ್ ಅವರ ಪ್ರಕಾರ ರಕ್ತದ ಪರೀಕ್ಷೆಯಿಂದ ಆನೆಯ ಮೂತ್ರ
ಕೋಶ ಹಾಗೂ ಯಕೃತ್ನಲ್ಲೂ ಸಮಸ್ಯೆ ಇರುವುದು ದೃಢಪಟ್ಟಿತ್ತು. ದೀರ್ಘಾವಧಿ ಪೋಷಕಾಂಶಗಳ ಕೊರತೆಯಿಂದ ಹೀಗೆ ಆಗಿತ್ತು.

‘1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉತ್ತಮ ಅಂಶಗಳನ್ನು ಒಳಗೊಂಡಿದೆ. ಆದರೆ, ಅದರ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದು ನಿವೃತ್ತರಾಗಿರುವ ಬಿ.ಕೆ. ಸಿಂಗ್ ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.