ಬೆಂಗಳೂರು: ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಮೂವರಿಗೆ ಹಾಗೂ ಮೂರು ಸಂಘ–ಸಂಸ್ಥೆಗಳಿಗೆವಿಶ್ವ ಪರಿಸರ ದಿನದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರು ವಿಜಯನಗರದ ಕೆಂಪಸಿದ್ಧೇಗೌಡ, ತಲಕಾಡಿನ ಡಾ.ತಿಪ್ಪೇಕಾಳಿ ರಂಗನಾಥ್ ಹಾಗೂ ಕಲಘಟಗಿಯ ಬಸವರಾಜ ಬಸಪ್ಪ ಇಂದೂರ ಅವರಿಗೆ ವ್ಯಕ್ತಿಗಳ ವಿಭಾಗದ ಪ್ರಶಸ್ತಿ ನೀಡಲಾಯಿತು. ‘ಸಹಜ ಸಮೃದ್ಧ’, ಉತ್ತರ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಕೊಪ್ಪಳ ನಗರಭೆಗಳಿಗೆ ಸಂಸ್ಥೆಗಳ ವಿಭಾಗದಡಿ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿ ತಲಾ ₹1 ಲಕ್ಷ ನಗದು ಒಳಗೊಂಡಿದೆ. ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಮಾತನಾಡಿ, ಅರಣ್ಯ ಇಲಾಖೆ ಇನ್ನು ಮುಂದೆ ಅಕೇಶಿಯಾ, ನೀಲಗಿರಿ ಗಿಡಗಳನ್ನು ನೆಡಲೇಬಾರದು. ಆಯಾ ಪ್ರದೇಶಗಳಿಗೆ ಹೊಂದುವ ಸ್ಥಳೀಯ ತಳಿಯ ಗಿಡಗಳನ್ನು ಬೆಳೆಸಬೇಕು ಎಂದರು. ಇದೇ ಸಂದರ್ಭದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ ವರ್ಮಾ ಅವರು ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದರು.

ಸಂಸದ ತೇಜಸ್ವಿ ಸೂರ್ಯ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಜಯರಾಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.