ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆಗಾಗಿಯೇ ಕುಖ್ಯಾತಿ ಗಳಿಸಿರುವ ಪ್ರದೇಶ ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್. ಈ ಸಿಲ್ಕ್ಬೋರ್ಡ್ ಜಂಕ್ಷನ್ನಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ತಲೆ ಎತ್ತಿದೆ. ಮೇಲ್ಸುತುವೆಯ ಒಂದು ಭಾಗ ಸಂಪೂರ್ಣವಾಗಿದ್ದು, ಬೆಂಗಳೂರು ದಕ್ಷಿಣ ಭಾಗದ ಜನರು, ಎಚ್ಎಸ್ಆರ್ ಬಡಾವಣೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಂತಹ ಐಟಿ ಹಬ್ ಗಳನ್ನು ಸಂಪರ್ಕಿಸುವ ಭಾಗ ಉದ್ಘಾಟನೆಗೆ ಸಿದ್ಧವಾಗಿದೆ. ಸಂಪೂರ್ಣ ಮೇಲ್ಸೇತುವೆಯು 2025ರ ಜುಲೈ ವೇಳೆಗೆ ಸಿದ್ಧವಾಗಲಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ. ಈ ಮೇಲ್ಸೇತುವೆಯ ಸದ್ಯದ ಚಿತ್ರಣ ನೀಡುವ Exclusive Video ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.