ದಾವಣಗೆರೆ: ಮದ್ಯದ ಅಂಗಡಿ ಆರಂಭಕ್ಕೆ ಪರವಾನಗಿ ಕೊಡಲು ಲಂಚ ಪಡೆಯುತ್ತಿರುವಾಗ ಅಬಕಾರಿ ಡಿ.ಸಿ. ಸೇರಿದಂತೆ ನಾಲ್ವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಜಿಲ್ಲಾ ಅಬಕಾರಿ ಡಿ.ಸಿ ಸ್ವಪ್ನ, ಪ್ರಥಮ ದರ್ಜೆ ಸಹಾಯಕ ಅಶೋಕ ಎಚ್.ಎಂ., ಹರಿಹರ ಅಬಕಾರಿ ವಲಯ ಕಚೇರಿಯ ಅಬಕಾರಿ ನಿರೀಕ್ಷಕಿ ಶೀಲಾ, ದ್ವಿತೀಯ ದರ್ಜೆ ಸಹಾಯಕಿ ಶೈಲಶ್ರೀ ಬಂಧಿತರು.

ಹರಿಹರದ ಅಮರಾವತಿ ಬಳಿ ಮದ್ಯದ ಅಂಗಡಿ ಆರಂಭಿಸಲು ಡಿ.ಜಿ. ರಘುನಾಥ ಎಂಬುವರು ಅರ್ಜಿ ಸಲ್ಲಿಸಿದ್ದರು. ಅವರಿಂದ ಆರೋಪಿಗಳು ₹ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಗರದ ದೇವರಾಜ ಅರಸು ಬಡಾವಣೆಯಲ್ಲಿ ಇರುವ ಅಬಕಾರಿ ಇಲಾಖೆ ಕಚೇರಿಯಲ್ಲಿ ಆರೋಪಿ ಅಶೋಕ ಎಚ್.ಎಂ. ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾದ ಪ್ರಭು ಬ. ಸೂರಿನ, ಮಧುಸೂಧನ್, ಎಚ್.ಎಸ್. ರಾಷ್ಟ್ರಪತಿ, ಹಾವೇರಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಪಂಡಿತ್ ಅವರ ನೇತೃತ್ವದಲ್ಲಿ ಕಾನ್‌ಸ್ಟೆಬಲ್‌ಗಳಾದ ವೀರೇಶಯ್ಯ, ಆಂಜನೇಯ, ಜಂಷಿದಾ ಖಾನಂ, ಧನರಾಜ್, ಮಲ್ಲಿಕಾರ್ಜುನ, ಲಿಂಗೇಶ, ಬಸವರಾಜ, ಗಿರೀಶ್, ವಿನಾಯಕ, ಕೃಷ್ಣನಾಯ್ಕ, ಮೋಹನ್, ಕೋಟಿನಾಯ್ಕ, ಮಾಲತೇಶ ಅರಸೀಕೆರೆ, ಎಸ್.ಎಸ್.ಕಡಕೋಳ, ಮಹಾಂತೇಶ ಕಂಬಳಿ, ಮಹಾಂತೇಶ ಕಂಬಳಿ, ಲಕ್ಷ್ಮವ್ವ ಅನವೇರಿ, ಹರ್ಷಿಯಾ, ಸರೋಜಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.