ಬೆಂಗಳೂರು: ಕುಂಬಾರ, ಕಮ್ಮಾರ, ಚಮ್ಮಾರಿಕೆ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು ಮುಂತಾದ ಅತಿ ಸಣ್ಣ ಕುಶಲಕರ್ಮಿಗಳಿಗೆ ಬ್ಯಾಂಕುಗಳಿಂದ ತಲಾ ₹ 50 ಸಾವಿರ ಸಾಲ– ಸಹಾಯಧನ (₹ 35 ಸಾವಿರ ಸಾಲ, ₹ 15 ಸಾವಿರ ಸಹಾಯಧನ) ಸೌಲಭ್ಯ ಒದಗಿಸುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನು ಮೋದನೆ ನೀಡಿದೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಮೂಲಕ ಈ ಯೋಜನೆ ಜಾರಿಗೆ ಬರಲಿದೆ.

ರಾಜ್ಯದಲ್ಲಿ ಸುಮಾರು 35 ಸಾವಿರ ಅತಿ ಸಣ್ಣ ನೋಂದಾಯಿತ ಕುಶಲಕರ್ಮಿ ಗಳಿದ್ದಾರೆ. ಪ್ರತಿ ಕುಶಲಕರ್ಮಿ ಪಡೆಯುವ ಸಾಲಕ್ಕೆ ಸಹಾಯಧನ ನೀಡಲು ಪ್ರಸಕ್ತ ಸಾಲಿನಲ್ಲಿ (2022–23) ₹ 5 ಕೋಟಿ ಹಾಗೂ ಮುಂದಿನ ಮೂರು ಆರ್ಥಿಕ ವರ್ಷಗಳಲ್ಲಿ ತಲಾ ₹ 15 ಕೋಟಿಯಂತೆ ವೆಚ್ಚ ಆಗಲಿದೆ. ಈವರೆಗೆ ನೋಂದಾಯಿಸಿಕೊಳ್ಳದ
ಕುಶಲಕರ್ಮಿಗಳಿಗೂ ಈ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ರಾಜ್ಯದ ಸುಮಾರು 30 ಸಾವಿರ ಕುಶಲಕರ್ಮಿಗಳು ಕೇಂದ್ರ ಸರ್ಕಾರದ ಅಭಿವೃದ್ಧಿ ಆಯುಕ್ತರಲ್ಲಿ (ಕರಕುಶಲ) ನೋಂದಾಯಿಸಿಕೊಂಡಿದ್ದಾರೆ.

ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಲ್ಲಿ ಸುಮಾರು 2,500 ಕುಶಲಕರ್ಮಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಕುಶಲಕರ್ಮಿಗಳು ಹಣಕಾಸು ಲಭ್ಯತೆ, ಸಾಲ ಸೌಲಭ್ಯ, ದುಡಿಮೆ ಬಂಡವಾಳ, ಹೊಸ ವಿನ್ಯಾಸ, ಮಾರುಕಟ್ಟೆ ಅವಕಾಶ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿ ದ್ದಾರೆ. ಅಂಥವರಿಗೆ ವಾಣಿಜ್ಯ ಬ್ಯಾಂಕು ಗಳು, ಸಹಕಾರ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಂದ (ಪತ್ತಿನ ಸಹಕಾರ ಸಂಘಗಳನ್ನು ಹೊರತುಪಡಿಸಿ) ಈ ಸಾಲ ಸೌಲಭ್ಯ ಸಿಗಲಿದೆ. ಕುಶಲಕರ್ಮಿಗಳು ಜಿಲ್ಲಾ
ಕೈಗಾರಿಕಾ ಕೇಂದ್ರಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬಂದ ಅರ್ಜಿಗಳನ್ನು ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಯ ಅನುಮೋದಿಸಿ ಸಂಬಂಧಿಸಿದ ಬ್ಯಾಂಕುಗಳಿಗೆ ಶಿಫಾರಸು ಮಾಡಲಿದೆ.

ಸಾಲ ಮಂಜೂರಾದ ಬಳಿಕ ಸಹಾಯಧನದ ಕ್ಲೈಮ್ ಸ್ವೀಕರಿಸಿ ಬ್ಯಾಂಕುಗಳಿಗೆ ಸಾಲದ ಮೇಲೆ
ಶೇ 30ರಷ್ಟು (ಗರಿಷ್ಠ ₹ 15 ಸಾವಿರ) ಸಹಾಯಧನವನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಕುಶಲ ಕರ್ಮಿಗಳಿಗೆ ಬ್ಯಾಂಕುಗಳಿಂದಪ್ರಕ್ರಿಯೆ ಶುಲ್ಕ, ದಾಖಲಾತಿ ಶುಲ್ಕ, ಮುಂಗಡ ಶುಲ್ಕಗಳಿಂದ ವಿನಾಯಿತಿ ಸಿಗಲಿದ್ದು, ಇಡೀ ಯೋಜನೆಯ ಅನುಷ್ಠಾನ, ಅನುದಾನ ಬಿಡುಗಡೆ ಮತ್ತುಉಸ್ತುವಾರಿಯನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ನಿರ್ದೇಶಕರು ನಿರ್ವಹಿಸಲಿದ್ದಾರೆ.

ಅರ್ಹ ಕುಶಲಕರ್ಮಿ ವೃತ್ತಿ ಯಾವುವು?

ಕಮ್ಮಾರಿಕೆ, ಬುಟ್ಟಿ ಹೆಣೆಯುವವರು, ಗೋಲ್ಡ್ ಸ್ಮಿತ್ (ಆಭರಣ ತಯಾರಿಕೆ), ಶ್ರೀಗಂಧ ಕ್ರಾಫ್ಟ್, ಮೈಸೂರು ರೋಸ್ವುಡ್ ಕೆತ್ತನೆ, ಚನ್ನಪಟ್ಟಣ ಆಟಿಕೆಗಳು, ಬಿದ್ರಿವೇರ್, ಕಿನ್ಹಾಳ್ ಆಟಿಕೆಗಳು, ನವಲಗುಂದ ರತ್ನಗಂಬಳಿಗಳು, ಮುಂಡಗೋಡು ಫೈಲ್ ಕಾರ್ಪೆಟ್ಗಳು, ಕಲ್ಲಿನ ಕೆತ್ತನೆ, ಮರದ ಕೆತ್ತನೆಗಳು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಗಂಜಿಫಾ ಕಲೆ, ಕುಂಬಾರಿಕೆ/ಟೆರಾಕೋಟ/ ಮಣ್ಣಿನ ವಿಗ್ರಹ ತಯಾರಿಕೆ, ಲೋಹದ ಕರಕುಶಲ, ಬೆತ್ತ ಮತ್ತು ಬಿದಿರು, ಸಂಡೂರು ಲಂಬಾಣಿ ಕಸೂತಿ, ಕಸೂತಿ ಕಲೆ, ಕೋಕೋನಟ್ ಶೆಲ್ ಕ್ರಾಫ್ಟ್, ಕಂಬಳಿ ನೇಯುವವರು, ಚಾಪೆ ಹೆಣೆಯುವುದು.

ಯೋಜನೆಗೆ ಅರ್ಹತೆಗಳೇನು?

lಕುಶಲಕರ್ಮಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು

lಕರಕುಶಲ ವೃತ್ತಿಗಾಗಿ ಬ್ಯಾಂಕಿನಿಂದ ಪಡೆದ ಸಾಲಕ್ಕೆ ಮಾತ್ರ ಸಹಾಯಧನ

lಒಬ್ಬರಿಗೆ ಒಂದು ಬಾರಿ ಮಾತ್ರ ಸಹಾಯಧನ.

lರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಥವಾ ಅಭಿವೃದ್ಧಿ ಆಯುಕ್ತರ (ಕರಕುಶಲ) ಕಚೇರಿಯಲ್ಲಿ ನೋಂದಣಿ ಆಗಿರಬೇಕು ಅಥವಾ ಉಪ ನಿರ್ದೇಶಕರು (ಗ್ರಾಮೀಣ ಕೈಗಾರಿಕೆ) ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಯಿಂದ ದೃಢೀಕರಣಗೊಂಡಿರಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.