ಕುಣಿಗಲ್: ಹೆಜ್ಜೇನು ದಾಳಿಗೆ ಸಿಲುಕಿ ಇಲ್ಲಿನ ಸ್ಟಡ್ ಫಾರಂನಲ್ಲಿ ವಂಶಾಭಿವೃದ್ಧಿಗೆ ಬಳಸುತ್ತಿದ್ದ ತಲಾ ₹ 1 ಕೋಟಿಗೂ ಹೆಚ್ಚು ಮೌಲ್ಯದ 2 ಕುದುರೆಗಳು ಶುಕ್ರವಾರ ಮೃತಪಟ್ಟಿವೆ.

ಅಮೆರಿಕ ಮೂಲದ ಏರ್ ಸಪೋರ್ಟ್ (15) ಮತ್ತು ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ (10) ಹೆಸರಿನ ಕುದುರೆಗಳು ಮೃತಪಟ್ಟಿವೆ.

ಗುರುವಾರ ಬೆಳಿಗ್ಗೆ ಬಯಲಿನಲ್ಲಿ ಮೇಯುವಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿವೆ. ಸ್ಟಡ್ ಫಾರಂ ವ್ಯವಸ್ಥಾಪಕ ಡಾ.ದಿನೇಶ್ ಮತ್ತು ಮನೋಜ್ ನೇತೃತ್ವದ ತಂಡ ತೀವ್ರ ಅಸ್ವಸ್ಥಗೊಂಡಿದ್ದ ಕುದುರೆಗಳಿಗೆ ಚಿಕಿತ್ಸೆ ನೀಡಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿವೆ. ಏರ್ ಸಪೋರ್ಟ್ ಕುದುರೆಗೆ ಜನಿಸಿದ್ದ ‘ವಾರ್ ಹ್ಯಾಮರ್’ ಹೆಸರಿನ ಕುದುರೆಯು ಏಷ್ಯಾದ ಪ್ರತಿಷ್ಠಿತ ಇಂಡಿಯನ್ ಡರ್ಬಿ ರೇಸ್ನಲ್ಲಿ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.