ಬೆಳಗಾವಿ: ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾಗವಾಡದಲ್ಲಿ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೌದು ಹುಲಿಯಾ ಎಂದು ಡೈಲಾಗ್ ಹೊಡೆದಿದ್ದರು.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಹೌದು ಹುಲಿಯಾ ಎಂದು ಹೇಳಿದ್ದ ವ್ಯಕ್ತಿಯನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. ಈ ಡೈಲಾಗ್ ಹೊಡೆದಿದ್ದ ವ್ಯಕ್ತಿಯ ಹುಡುಕಾಟಕ್ಕೆ ನೆಟ್ಟಿಗರು ಗೂಗಲ್ ಮೊರೆ ಹೋಗಿದ್ದರು.

ಸಿದ್ದರಾಮಯ್ಯ ಅವರು, ‘ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು’ ಎನ್ನುತ್ತಿದ್ದಂತೆಯೇ, ಜನರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬ ‘ಹೌದು ಹುಲಿಯ’ ಎಂದಿದ್ದರು.

‘ಯಾರಯ್ಯಾ ಅಂವ ಹೇ ಕಳುಸ್ರೀ ಅವ್ನ ಆಚೆಗೆ. ಸುಮ್ನೆ ಕುತ್ಕಬೇಕು. ಇನ್ನೊಂದ್ಸಾರಿ ಮಾತಾಡುದ್ರೆ ಕಳಿಸ್ಬಿಡ್ತಿನಿ ಆಚೆಗೆ. ಬೆಳಿಗ್ಗೆನೇ ಗುಂಡ್ ಹಾಕ್ಬಿಟ್ಟವ್ನೆ ನೆಡಿಯೊ, ಕಳುಸ್ರೀ ಅವ್ನ ಆಚೆಗೆ’ ಎಂದು ಹೇಳಿದ್ದ ಸಿದ್ದರಾಮಯ್ಯ ಮಾತು ಮುಂದುವರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.