ಭಾರತೀನಗರ (ಮಂಡ್ಯ): ಸಮೀಪದ ಚಿಕ್ಕರಸಿನಕೆರೆ ಕಾಲಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದೇವರ ದರ್ಶನ ಪಡೆದರು.

ಮನೆ ದೇವರಾದ ಕಾಲಭೈರವೇಶ್ವರಸ್ವಾಮಿಯ ದರ್ಶನ ಪಡೆದು, ಮಂಗಳಾರತಿ ಸ್ವೀಕರಿಸಿದರು. ನಂತರ ಗೌಪ್ಯ ಹರಕೆ ಹೊತ್ತು ಕಾಲಭೈರವೇಶ್ವರಸ್ವಾಮಿ ದೇವರ ಬಸಪ್ಪನ ಪಾದ ಪಡೆಯಲು ಮುಂದಾದರು.

ದೇವರ ಬಸಪ್ಪನ ಬಳಿ ಹರಕೆ ಕಟ್ಟಿಕೊಂಡು ರೋಹಿಣಿ ಸಿಂಧೂರಿ ಕೈಯನ್ನು ಬಸಪ್ಪನ ಪಾದದ ಮುಂದೆ ಇರಿಸಿ ದೇವರನ್ನು ಧ್ಯಾನಿಸಿದರು.

ಬಸಪ್ಪ ಕೆಲ ಸಮಯದ ಬಳಿಕ ರೋಹಿಣಿ ಸಿಂಧೂರಿಗೆ ಬಲಭಾಗದ ಪಾದ ನೀಡಿದೆ. ಇದರಿಂದ ಸಂತಸ
ಗೊಂಡ ರೋಹಿಣಿ, ದೇವಾಲಯಕ್ಕೆ ಮತ್ತೆ ಬಂದು ಅಭಿವೃದ್ಧಿಗೆ ಸಹಾಯ ನೀಡುವುದಾಗಿ ಭರವಸೆ ನೀಡಿದರು.

ದೇವಾಲಯದ ಅಧ್ಯಕ್ಷ ಶಿವಲಿಂಗೇಗೌಡ, ಆಡಳಿತ ಮಂಡಳಿ ಸದಸ್ಯರಾದ ಡಿ.ಎ.ಕೆರೆ ರಘು, ಯಜಮಾನ್ ಪುಟ್ಟ ರಾಜು, ಯಜಮಾನ್ ಪುಟ್ಟೇಗೌಡ, ಮುಖಂಡರಾದ ಸಿದ್ದಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.