ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) 2022ನೇ ಸಾಲಿನ ಸಾಮಾನ್ಯ ದಾಖಲಾತಿ ಪರೀಕ್ಷೆಯ (ಸಿಎಟಿ) ಫಲಿತಾಂಶ ಪ್ರಕಟಿಸಿದ್ದು, ಪುರುಷ ಅಭ್ಯರ್ಥಿಗಳೇ ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ.

ದೆಹಲಿ, ಮಹಾರಾಷ್ಟ್ರ, ತೆಲಂಗಾಣದ ತಲಾ ಇಬ್ಬರು, ಗುಜರಾತ್, ಹರಿಯಾಣ, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶದ ತಲಾ ಒಬ್ಬರು ಸೇರಿದಂತೆ 11 ಅಭ್ಯರ್ಥಿಗಳು ಶೇ 100ರಷ್ಟು ಅಂಕ ಗಳಿಸಿದ್ದಾರೆ. ಶೇ 100ರಷ್ಟು ಅಂಕ ಗಳಿಸಿದ ಎಲ್ಲರೂ ಪುರುಷ ಅಭ್ಯರ್ಥಿಗಳು ಎನ್ನುವುದು ಈ ಬಾರಿಯ ಫಲಿತಾಂಶದ ವಿಶೇಷ.

ಕರ್ನಾಟಕದ ಇಬ್ಬರು ಸೇರಿದಂತೆ 22 ಅಭ್ಯರ್ಥಿಗಳು ಶೇ 99.99 ಅಂಕ ಗಳಿಸಿದ್ದಾರೆ. ಅವರಲ್ಲಿ 21 ಅಭ್ಯರ್ಥಿಗಳು ಪುರುಷರು, ಒಬ್ಬರು ಮಹಿಳೆ. ಶೇ 99.98 ಅಂಕಗಳನ್ನು 22 ಅಭ್ಯರ್ಥಿಗಳು ಗಳಿಸಿದ್ದು, ಅವರಲ್ಲಿ 19 ಪುರುಷರು ಇದ್ದಾರೆ.

ದೇಶದ 154 ನಗರಗಳ 293 ಪರೀಕ್ಷಾ ಕೇಂದ್ರಗಳಲ್ಲಿ ನ. 27ರಂದು ಪರೀಕ್ಷೆ ನಡೆಸಲಾಗಿತ್ತು. 2.22 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ಶೇ 35 ಮಹಿಳೆಯರು, ಶೇ 65ರಷ್ಟು ಪುರುಷರು ಇದ್ದರು. ಐಐಎಂ ಹೊರತುಪಡಿಸಿ ದೇಶದ 90ಕ್ಕೂ ಹೆಚ್ಚು ಸಂಸ್ಥೆಗಳು ಸಿಎಇ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿವೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು www.iimcat.ac.in ವೀಕ್ಷಿಸಬಹುದು ಎಂದು ಸಿಎಟಿ ಸಂಚಾಲಕ ಆಶಿಸ್ ಮಿಶ್ರಾ ಮಾಹಿತಿನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.