ಬೆಂಗಳೂರು: ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಚೇತನ್, ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ ಎಂದು ಹೇಳಿದ್ದಾರೆ.

ಈ ಹಿಂದೆ ಕುಮಾರಸ್ವಾಮಿ ಅವರು, ಪ್ರಲ್ಹಾದ್ ಜೋಶಿಯು ಗಾಂಧಿಯನ್ನು ಕೊಂದ ಪೇಶ್ವೆ ಬ್ರಾಹ್ಮಣ ಸಂಪ್ರದಾಯದಿಂದ ಬಂದವರು; ಜೋಶಿ ‘ಹಳೆಯ ಕರ್ನಾಟಕದ ಸಂಪ್ರದಾಯದ’ ಬ್ರಾಹ್ಮಣರಲ್ಲ ಎಂದು ಹೇಳಿದ್ದರು. ಮುಂದುವರೆದು ನಾವು ‘ಹಳೆಯ ಕರ್ನಾಟಕ ಸಂಪ್ರದಾಯದ’ ಬ್ರಾಹ್ಮಣರನ್ನು ಪೂಜಿಸುತ್ತೇವೆ ಮತ್ತು ಅವರ ಕಾಲಿಗೆ ಬೀಳುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಚೇತನ್, ಇದು ಎಂತಹ ಪಂಥೀಯ ಮತ್ತು ಮೂಢನಂಬಿಕೆಯ ಅಸಂಬದ್ಧತೆ! ಎಂದಿದ್ದಾರೆ. ಹಾಗೇ ನಮಗೆ ಬ್ರಾಹ್ಮಣರು ಸಮಸ್ಯೆಯಲ್ಲ, ಬ್ರಾಹ್ಮಣ್ಯವು ದೊಡ್ಡ ಸಮಸ್ಯೆಯಾಗಿದೆ. ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ ಎಂದು ಹೇಳಿದ್ದಾರೆ.

ಚೇತನ್ ಹೇಳಿಕೆಗೆ ವಿವಿಧ ಬಗೆಯ ಕಮೆಂಟ್‌ಗಳು ವ್ಯಕ್ತವಾಗಿವೆ. ಕುಮಾರಸ್ವಾಮಿ ಹಾಗೂ ಚೇತನ್ ಹೇಳಿಕೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.