ಮುಂಬೈ:ಗುರುವಾರ ನಡೆಯುವ ವಿಧಾನಸಭೆ ಕಲಾಪದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಅತೃಪ್ತ ಜೆಡಿಎಸ್ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಇತರೆ ಯಾವ ಅತೃಪ್ತ ಶಾಸಕರು ಸಹ ಸದನದಲ್ಲಿ ಭಾಗವಹಿಸುವುದಿಲ್ಲ ಎಂದರು.

ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಂವಿಧಾನದ ಆಶಯ ಎತ್ತಿ ಹಿಡಿದಂತಾಗಿದೆ. ಇದು ಮಧ್ಯಂತರ ತೀರ್ಪು ಆಗಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಪುನರ್ ವ್ಯಾಖ್ಯಾನ ಆಗಬೇಕಿದೆ ಎಂದರು. ಇದರ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿಗೆ ಶುಕ್ರವಾರ ಹಿಂದಿರುಗುವ ಸಾಧ್ಯತೆ ಇದೆ, ನಾವು ದುಡ್ಡಿಗಾಗಿ ರಾಜೀನಾಮೆ ನೀಡಿಲ್ಲ,‘ಬಂದದ್ದೆಲ್ಲಾ ಬರಲಿ, ಕರ್ನಾಟಕ ಜನರ ಆಶೀರ್ವಾದ ನಮಗಿರಲಿ’ ಎಂದು ವಿಶ್ವನಾಥ್ ಹೇಳಿದರು.

13-14 ತಿಂಗಳಿನಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲವೇನೋ ಎಂಬ ಸ್ಥಿತಿ ಇತ್ತು. ಕರ್ನಾಟಕ ರಾಜ್ಯದ ಜನರ ಅವಕೃಪೆಗೆ ಒಳಗಾಗಿರುವ ಸಮ್ಮಿಶ್ರ ಸರ್ಕಾರ ಎಷ್ಟು ಬೇಗ ಹೋಗುತ್ತೋ ಅಷ್ಟು ಒಳ್ಳೆಯದು ಅನ್ನುವುದು ಜನರ ಅಭಿಪ್ರಾಯ. ಮತದಾರರ ಕ್ಷಮೆ ಕೇಳಿ ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತಿದ್ದೀವಿ. ನಿಮ್ಮ ‘ಇಸಂ’ಗಳು ನಮಗೆ ಬೇಕಿಲ್ಲ ಅಂತ ಜನರು ಹೇಳ್ತಿದ್ದಾರೆ. ಮುಂದೆ ಬೇರೆ ಯಾವುದಾದರೂ ಸರ್ಕಾರ ಬರಲಿ ಎಂದು ವಿಶ್ವನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.