ಹುಬ್ಬಳ್ಳಿ: ‘ದಲಿತರು ಹಾಗೂ ಹಿಂದುಳಿದ ವರ್ಗದವರ ಮೇಲೆ ರಾಷ್ಟ್ರದ್ರೋಹಿ ಅಲ್ಪಸಂಖ್ಯಾತರಿಂದ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸಂಘಟನೆಯೊಂದನ್ನು ರಚಿಸುವ ಬಗ್ಗೆ ಚರ್ಚಿಸಲು ಬಾಗಲಕೋಟೆಯಲ್ಲಿ ಅ.20ರಂದು ಬೆಳಿಗ್ಗೆ 11ಕ್ಕೆ ಸಭೆ ಕರೆಯಲಾಗಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೋಮವಾರ ಇಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘಟನೆ ರಚಿಸುವ ಸಂಬಂಧ ಉತ್ತರ ಕರ್ನಾಟಕದ ಹಲವು ಪ್ರಮುಖ ನಾಯಕರ ಜೊತೆ ಚರ್ಚಿಸಿದ್ದೇವೆ. ಮಾಜಿ ಸಂಸದ ವಿರೂಪಾಕ್ಷಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕರಾದ ರಘುಪತಿ ಭಟ್, ವೀರಭದ್ರಪ್ಪ ಹಾಲಹರವಿ, ಅಹಿಂದ ಸಂಘಟನೆಯ ನಾಯಕ ಮುಕುಡಪ್ಪ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿ, ಅಭಿಪ್ರಾಯ ತಿಳಿಸಿದ್ದಾರೆ’ ಎಂದರು.

‘30–40 ಜನ ಸಾಧು ಸಂತರು ಇಂತಹ ಸಂಘಟನೆಯೊಂದನ್ನು ರಚಿಸುವಂತೆ ಸಲಹೆ ನೀಡಿದ್ದಾರೆ. ಅವರ ಸಲಹೆ ಮೇರೆಗೆ ಸಂಘಟನೆ ರಚಿಸಲು ಮುಂದಾಗಿದ್ದೇವೆ. ಈ ಸಂಘಟನೆಯು ರಾಜಕೀಯೇತರವಾಗಿದೆ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಸಂಘಟನೆಯ ಹೆಸರನ್ನು ಇನ್ನೂ ನಿಗದಿ ಮಾಡಿಲ್ಲ. ‘ರಾಯಣ್ಣ– ಚನ್ನಮ್ಮ ಬ್ರಿಗೇಡ್’ ಎಂದು ನಾಮಕರಣ ಮಾಡುವಂತೆ ಕೆಲವರು ಸಲಹೆ ನೀಡಿದ್ದಾರೆ. ಬಾಗಲಕೋಟೆಯ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ನಾಗಮಂಗಲದಲ್ಲಿ ತಲವಾರ್ ಹಿಡಿದು, ಪೆಟ್ರೋಲ್ ಬಾಂಬ್ ಎಸೆದ ರಾಷ್ಟ್ರದ್ರೋಹಿ ಅಲ್ಪಸಂಖ್ಯಾತರ ವಿರುದ್ಧ ನಾವಿದ್ದೇವೆ. ರಾಷ್ಟ್ರಭಕ್ತರ ವಿರುದ್ಧ ಅಲ್ಲ’ ಎಂದರು.

ತಪ್ಪು ಮಾಡಿದೆ: ‘ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿದಾಗ, ಸಾಕಷ್ಟು ಜನಬೆಂಬಲ ಸಿಕ್ಕಿತ್ತು. ಅದನ್ನು ಸಹಿಸದ ಬಿ.ಎಸ್.ಯಡಿಯೂರಪ್ಪ ಅವರು ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ದೂರು ಹೇಳಿದರು. ಆಗ, ಸಂಘಟನೆ ನಿಲ್ಲಿಸುವಂತೆ ಅಮಿತ್ ಶಾ ಸೂಚಿಸಿದರು. ಆಗ ನಿಲ್ಲಿಸಿದೆ. ಅಂದು ನಾನು ನಿಲ್ಲಿಸಿ ತಪ್ಪು ಮಾಡಿದೆ ಎಂದು ಈಗ ನನಗನಿಸುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.