ಬೆಂಗಳೂರು: ಮಾಪ್ಅಪ್ ಹಂತದ ಸೀಟು ಹಂಚಿಕೆಯ ನಂತರ ಉಳಿದಿರುವ ವೈದ್ಯಕೀಯ ಪದವಿ ಸೀಟುಗಳನ್ನು ಆನ್ಲೈನ್ (ಸ್ಟ್ರೇ ವೇಕೆನ್ಸಿ) ಸುತ್ತಿನಲ್ಲಿ ಹಂಚಿಕೆ ಮಾಡುವ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿದೆ.

ವೈದ್ಯಕೀಯ ಸೀಟ್ಮ್ಯಾಟ್ರಿಕ್ಸ್ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅ.28ರ ಮಧ್ಯಾಹ್ನ 2ಕ್ಕೆ ಮುನ್ನ ಹೊಸ ಆಪ್ಷನ್ಗಳನ್ನು ನಮೂದಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಸೂಚಿಸಿದ್ದಾರೆ.

ಇದುವರೆಗೂ ವೈದ್ಯಕೀಯ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರು. ಶುಲ್ಕ ಠೇವಣಿ ಪಾವತಿಸಲು ಅ. 28ರ ಮಧ್ಯಾಹ್ನ 12ರವರೆಗೆ ಅವಕಾಶವಿರುತ್ತದೆ. ಅಂದು ರಾತ್ರಿ 8ರ ನಂತರ ಈ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ.

ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಪ್ರವೇಶದ ಆದೇಶವನ್ನು 29 ಅಥವಾ 30ರಂದು ಡೌನ್ಲೋಡ್ ಮಾಡಿಕೊಳ್ಳಬಹುದು. ಮೂಲ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ಕಾಲೇಜಿನಲ್ಲಿ 30ರ ಸಂಜೆ 5:30ರ ಒಳಗೆ ಪ್ರವೇಶ ಪಡೆಯಬೇಕು ಎಂದು ಹೇಳಿದ್ದಾರೆ.

ಡೆಂಟಲ್, ಆಯುಷ್ಗೆ ಮಾಪ್ಅಪ್ ಸುತ್ತು:

ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ ಆನ್ಲೈನ್ ಮಾಪ್ಅಪ್ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಆಪ್ಷನ್ ದಾಖಲಿಸಲು ಅ. 27ರವರೆಗೆ ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.